Thursday, October 26, 2023

ನೇತ್ರಾವತಿ ನದಿ ನೀರಿನ‌ ಮಟ್ಟ 8 ಮಿ.ಮಿ.: ನದಿ ತೀರದ ಜನತೆ ಎಚ್ಚರ!

Must read

ಬಂಟ್ವಾಳ : ಕೆಲವು ದಿನಗಳಿಂದ ನಿರಂತರ ವಾಗಿ ಎಡೆ ಬಿಡದೆ ಸುರಿಯುವ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದಲೂ ನೀರಿನ ಹರಿವು ಹೆಚ್ಚಾಗುತ್ತಲೆ ಇದ್ದು, ಇಂದು ಬೆಳಿಗ್ಗೆ 8 ಮಿ.ಮಿ.ಎತ್ತರದಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿದೆ.
ನೀರಿನ ಅಪಾಯದ ಮಟ್ಟ 8.5 ಆಗಿದ್ದು, ಈಗಾಗಲೇ 8 ಮಿ.ಮಿ.ಎತ್ತರದಲ್ಲಿ ನೀರು ಹರಿಯುತ್ತಿದ್ದು, ನೆರೆ ಬರುವ ಬಹುತೇಕ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ನದಿ ತೀರದ ಜನರ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.
*ತಗ್ಗು ಪ್ರದೇಶ ಜಲಾವೃತ*
ನೀರು ಹೆಚ್ಚಾದಂತೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು ಹಳೆ ಪೇಟೆ ಯಲ್ಲಿರುವ ಮಿಲಿಟರಿ ಗ್ರೌಂಡ್ ಗೆ ನೀರು ತುಂಬಿದೆ, ಪಾಣೆಮಂಗಳೂರು ಸೇತುವೆಯ ಅಡಿ ಭಾಗದ ಕಂಚಿಕಾರ ಪೇಟೆ ಯ ರಸ್ತೆಗೂ ನೀರು ಬಂದಿದೆ ಆದರೆ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.
*ಇಲಾಖೆ ಸಂಪೂರ್ಣ ಸಜ್ಜು*
ನೀರು ಹೆಚ್ಚಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡರೆ ಜನರು ಯಾವುದೇ ಗೊಂದಲಕ್ಕೆ ಎಡೆ ಮಾಡುವುದು ಬೇಡ.
ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ಬೋಟ್ ಹಾಗೂ ಇತರ ಸಕಲ ವ್ಯವಸ್ಥೆ ಗಳೊಂದಿಗೆ ಸಜ್ಜಾಗಿದೆ ಎಂದು ತಹಶೀಲ್ದಾರ್ ಸ್ಮಿತಾರಾಮು ತಿಳಿಸಿದ್ದಾರೆ.
ತಗ್ಗು ಪ್ರದೇಶದ ಜನರು ನೀರಿಗೆ ಇಳಿಯಬಾರದು , ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಪೋಲಿಸ್ ಇಲಾಖೆ ಅಥವಾ ಕಂದಾಯ ಇಲಾಖೆಗೆ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

More articles

Latest article