ಬಂಟ್ವಾಳ: ಜುಲೈ 3 ರಂದು ಆದಿತ್ಯವಾರ ನೇತ್ರಾವತಿ ನದಿಗೆ ಈಜಲು ಹೋಗಿ ನೀರು ಪಾಲಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ತಲೆಮೊಗರು ನಿವಾಸಿ ರುಕ್ಮಯ ಸಪಲ್ಯ ಎಂಬವರ ಮಗ ಅಶ್ವಿತ್ ನೀರು ಪಾಲಾದ ಯುವಕ .
ಅಶ್ವಿತ್ ಅವರ ಚಿಕ್ಕಪ್ಪ ನಾಗೇಶ್ ಅವರ ಮನೆಯಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಮುಗಿಸಿ ಬಳಿಕ ಸಂಬಂಧಿಕ ಯುವಕರ ಜೊತೆ
ಮನೆಯ ಸಮೀಪದಲ್ಲಿ ಹರಿಯುವ ನೇತ್ರಾವತಿ ನದಿಗೆ ಈಜಾಟಕ್ಕಾಗಿ ತೆರಳಿದ್ದರು.
ಕಳೆದ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದ ಪರಿಣಾಮ ನದಿಯಲ್ಲಿ ನೀರಿನ ಉಯಿಲು ಕೂಡ ಹೆಚ್ಚಾಗಿತ್ತು.
ಸ್ನೇಹಿತ ರು ಈಜಾಡುತ್ತಿದ್ದಂತೆ ನೀರಿನ ಸೆಳೆತಕ್ಕೆ ಸಿಕ್ಕಿ ಅಶ್ವಿತ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ .
ಕೂಡಲೇ ಸ್ಥಳೀಯ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದರು ಯುವಕನ ಪತ್ತೆಯಾಗಿಲ್ಲ.
ಇಂದು ಮಳೆಯ ನಡುವೆಯೂ ಸ್ಥಳೀಯ ಬೋಟ್ ಹಾಗೂ ಅಗ್ನಿಶಾಮಕ ದಳದ ಬೋಟ್ ಮೂಲಕ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಎಸ್‌ಐ.ಹರೀಶ್ ಬೇಟಿ ನೀಡಿದ್ದಾರೆ.