ಪಾಕೃತಿಕ ವಿಕೋಪದಿಂದ ಗುಡ್ಡ ಜರಿದು ಸಂಚಾರಕ್ಕೆ ಶಿರಾಡಿ ಘಾಟಿ ಬಂದ್ ಆಗಿರುವ ಹಾಗೂ ಸಂಪಾಜೆ ಮತ್ತು ಚಾರ್ಮಡಿ ಘಾಟಿಗಳಲ್ಲಿಯೂ ವಾಹನ ಸಂಚಾರ ದುಸ್ತರವಾಗಿರುವ ಹಿನ್ನಲೆಯಲ್ಲಿ *ಮಂಗಳೂರು ಬೆಂಗಳೂರು ಹಾಗೂ ಬೆಂಗಳೂರು ಮಂಗಳೂರು* ನಡುವೆ ಪ್ರತಿನಿತ್ಯ ಹೆಚ್ಚುವರಿ ಟ್ರೈನ್ ಓಡಿಸುವಂತೆ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಶ್ಣವ್ ರವರನ್ನು ಜುಲೈ 18 ರಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.