ಬಂಟ್ವಾಳ:ಬಿ.ಸಿರೋಡು,ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ N.H73ರ ಪಂಜಿಕಲ್ಲು ಗ್ರಾಮ ಪಂಚಾಯತ್ ಮೂಡನಡುಗೋಡು ಗ್ರಾಮ ವ್ಯಾಪ್ತಿಯ ಕೊಪ್ಪಳ (ವಾಮದಪದವು ಕ್ರಾಸ್) ರಸ್ತೆಯಲ್ಲಿ ಕಾಂಗ್ರೆಸ್ ಅಭಿಮಾನಿಗಳು ಹಾಗೂ ಊರವರ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ತಂಗುದಾಣದ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಬಿ . ರಮಾನಾಥ ರೈ ಅವರು ನೇರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ರಮಾನಾಥ ರೈಯವರು.ಜನರ ಸೇವೆಯನ್ನು ನಾನು ಶಾಸಕನಾಗಿರಲ್ಲಿದಿದ್ದರು ಸದಾ ರಾತ್ರಿ ಹಗಲು ಸೇವೆ ಮಾಡುತ್ತಾ ಇದ್ದೆನೆ .
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುದರ್ಶನ್ ಜೈನ್ , ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಕರ್ ಜೈನ್ ,ಮಾಯಿಲಾಪ್ಪ ಸಾಲ್ಯಾನ್, ಬೇಬಿ ಕುಂದರ್,ದೇವಪ್ಪ ಕುಲಾಲ್ ,ಉದಯ ಮೆನಾಡ್,ವೆಂಕಪ್ಪ ಪೂಜಾರಿ, ಗಣಪತಿ ಶೆಣೈ, ಸುರೇಶ್ ಜೊರಾ,ಪ್ರವಿಣ್ ರೋಡ್ರಿಗಸ್, ಸತೀಶ್ ಕುಮಾರ್ ಮಲೆಕೊಡಿ. ಈ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ 80 ವರ್ಷದ ಮಹಿಳೆಯೊರ್ವರು ಬಂದು ರಮಾನಾಥ ರೈವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.