ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ ಗ್ರಾಮ ದೈವ ಕೊಡಮಣಿತ್ತಾಯ ದೈವಸ್ಥಾನ ಬಳಿ ನಿರ್ಮಿಸಲಾದ ಹಳೆಯ ತಡೆ ಗೋಡೆ ಕುಸಿದು ಬಿದ್ದಿದೆ.
ಕುಸಿದು ಬಿದ್ದ ತಡೆಗೋಡೆಯು ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಬಿದ್ದಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.ಈ ಘಟನೆ ಕುರಿತು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ರವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಳಿಪಾಡಿ ಯವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.
ಹಾಗೂ ದೈವಸ್ಥಾನ ಆಡಳಿತ ಸಮಿತಿಯವರು ಶಾಶ್ವತ ತಡೆ ಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗಾಗಿ ಮನವಿ ಸಲ್ಲಿಸಿದ್ದಾರೆ.ಸಾರ್ವಜನಿಕ ಬೇಡಿಕೆಗೆ ತಕ್ಷಣವೇ ಸ್ಪಂದನೆ ನೀಡಿದ ಶಾಸಕರು ಸಂಬಂಧ ಪಟ್ಟ ಜಿಲ್ಲಾ ಪಂಚಾಯತ್ ಇಂಜಿನಿಯರ್ ರವರಿಗೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುವುದರ ಜೊತೆಗೆ ರೂ 10 ಲಕ್ಷ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.ಶೀಘ್ರದಲ್ಲಿ ಅನುದಾನ ಬಿಡುಗಡೆ ಗೊಳಿಸಿ ಕಾಮಗಾರಿ ಪ್ರಾರಂಬಿಸಲು ಸೂಚನೆ ನೀಡಿದ್ದಾರೆ.
ಶಾಸಕರಿಗೆ ಧಾರ್ಮಿಕ ಕೇಂದ್ರಗಳ ಮೇಲೆ ಇರುವ ನಂಬಿಕೆ ಬಗ್ಗೆ ಕರ್ಪೆ ಗ್ರಾಮಸ್ಥರಲ್ಲಿ ಪ್ರಶಂಸೆ ಮೂಡಿ ಬಂದು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.ಸ್ಥಳೀಯ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟಿಯಪ್ಪ ಪೂಜಾರಿ,ವಿದ್ಯಾ ಪ್ರಭು ಹೇಮಲತಾ.ಬಿಜೆಪಿ ಬೂತ್ ಅಧ್ಯಕ್ಷರಾದ ತೇಜಸ್ ಪೂಜಾರಿ, ನವೀನ್ ಪೂಜಾರಿ, ಕಾರ್ಯದರ್ಶಿ ಗಳಾದ ರಂಜಿತ್ ಕರ್ಪೆ, ಹರೀಶ್ ಪೂಜಾರಿ ಶೆಟ್ಟಿ ಬೆಟ್ಟು, ಭಾಸ್ಕರ್ ಪ್ರಭು, ಹರೀಶ್ ಪೂಜಾರಿ ಪಾದೆ, ದೈವಸ್ಥಾನ ಕಮಿಟಿ ಸಮೇತ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.