ವಿಟ್ಲ: ಕನ್ಯಾನ ಗ್ರಾಮದ ಬಂಡಿತಡ್ಕ ನಿವಾಸಿ ಕನ್ಯಾನ ಪೇಟೆಗೆ ಹೋಗಿ ಬರುವುದಾಗಿ ಹೋದವರು ಮರಳಿ ಬರದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಡಿತಡ್ಕ ನಿವಾಸಿ ಮುಂಡಪ್ಪ (65) ನಾಪತ್ತೆಯಾದವರು. ಜು.4ರಂದು ಬೆಳಗ್ಗೆ ಕನ್ಯಾನದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಈ ವರೆಗೆ ಮನೆಗೂ ಬಾರದೆ ಸ್ನೇಹಿತರ ಮನೆಗೂ ಹೋಗದೆ ಮತ್ತು ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ.