ಬಂಟ್ವಾಳ: ಕುಂಭದ್ರೋಣ ಮಳೆಗೆ ಪಂಜಿಕಲ್ಲು ಎಂಬಲ್ಲಿಗುಡ್ಡ ಜರಿದು ಮನೆಗೆ ಬಿದ್ದ ಪರಿಣಾಮ ಅದರಲ್ಲಿ ವಾಸವಿದ್ದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದು, ಓರ್ವ ನನ್ನು ರಕ್ಷಣೆ ಮಾಡಲಾಗಿದ್ದು ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆಯ ಹೊರಗಿರುವ ಕೊಠಡಿಗೆ ಗುಡ್ಡ ಜರಿದು ಬಿದ್ದ ಘಟನೆ ಇಂದು ರಾತ್ರಿ ವೇಳೆ ನಡೆದಿದೆ.
ಕಾಲೋ ಅವರ ಮನೆಯ ತೋಟದ ಕೆಲಸಕ್ಕೆ ಉತ್ತರಕನ್ಮಡ ಮೂಲದ ವ್ಯಕ್ತಿಗಳು ಮನೆಯೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ನಾಲ್ವರು ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದ ಮನೆಯ ಹತ್ತಿದರಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು.
ಇಂದು ಮನೆಯ ಸಮೀಪದ ಗುಡ್ಡ ಜರಿದು ಮಣ್ಣಿನ ಜೊತೆ ಇವರಿದ್ದ ಕೊಠಡಿ ನೆಲಸಮವಾಗಿದೆ.
ಪ್ರಸ್ತುತ ಅದರೊಳಗಿರುವ ನಾಲ್ವರಿಗಾಗಿ ಜೆಸಿಬಿ ಬಳಸಿ ಮಣ್ಣು ತೆರವುಮಾಡಿ ಶೋಧ ಮಾಡಲಾಗುತ್ತಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್. ಐ.ಹರೀಶ್ ಬೇಟಿ ನೀಡಿದ್ದಾರೆ.
ಇವರ ಹೆಸರು ಊರು ಇನ್ನಷ್ಷೇ ತಿಳಿಯಬೇಕಾಗಿದೆ.