ಬಂಟ್ವಾಳ: ಹಿಂದುಳಿದ ವರ್ಗಗಳ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಪಕ್ಷದವರು ಮಾಡಿದ ಪರಿಣಾಮ ಅನೇಕ ಯುವಕರು ಇಂದಿಗೂ ಜೈಲಿನಲ್ಲಿ ಜೀವನ ಮಾಡುತ್ತಿದ್ದಾರೆ ಎಂದು, ಭಾರತೀಯ ಜನತಾ ಪಾರ್ಟಿ ಬ್ಯುಸಿನೆಸ್ ಪಾರ್ಟಿಯಾಗಿದ್ದು, ಭಯೋತ್ಪಾದನಾ ಪಾರ್ಟಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ
ಮದುಬಂಗಾರಪ್ಪ ಅವರು ಹೇಳಿದರು.

ಅವರು ಜುಲೈ 4 ರಂದು ಬಿಸಿರೋಡು ಶ್ರೀ ಬ್ರಹ್ಮನಾರಾಯಣ ಗುರು ಸಭಾ ಭವನದ ಹಾಲ್ ನಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್, ಹಿಂದುಳಿದ ವರ್ಗ ಘಟಕ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಹಿಂದುಳಿದ ವರ್ಗ ಘಟಕ ಇವುಗಳ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶವನ್ನು ಮಾತನಾಡಿದರು.
‌ಮುಂದಿನ ಚುನಾವಣೆ ಯಲ್ಲಿ ಸ್ಪಷ್ಟವಾದ ಬಹುಮತದಿಂದ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದೆ, ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಬಡ್ಡಿ ಸಮೇತ ತೀರಿಸಿಕೊಳ್ಳಲು ಕಾಂಗ್ರೇಸ್ ಕಾರ್ಯಕರ್ತರು ಒಂದಾಗಿ 2023 ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಬಿಜೆಪಿ ಯವರು ದ್ರೋಹ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಈ ದೇಶಕ್ಕೆ,ರಾಜ್ಯಕ್ಕೆ ಹಿಂದುಳಿದ ವರ್ಗಕ್ಕೆ, ಬಡವರಿಗೆ ಅನ್ಯಾಯ ಮಾಡಿದ ಪಕ್ಷ ಎಂದು ಅವರು ಹೇಳಿದರು.
ಜೆ.ಡಿ.ಎಸ್.ಪಕ್ಷದ ಶಾಸಕನಾಗಿದ್ದ ಸಂದರ್ಭದಲ್ಲಿ 21 ಸಾವಿರ ಎಕರೆ ಭೂ ಹಕ್ಕನ್ನು ಉಚಿತವಾಗಿ ನೀಡಿದ್ದೇನೆ .
ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಅರಣ್ಯ ಜಮೀನಲ್ಲಿ ಕೃಷಿ ಮಾಡುವವರಿಗೆ ನೀವು ಕಳ್ಳರು ಎಂಬ ನೋಟೀಸ್ ಜಾರಿಯಾಗುತ್ತಿದೆ , ಆದರೆ ಸಿದ್ದರಾಮಯ್ಯ ಸರಕಾರದ ಅಡಳಿತ ದ ಅವಧಿಯಲ್ಲಿ ಅರಣ್ಯ ಜಮೀನಿನ ಲ್ಲಿ ಕೃಷಿ ಮಾಡುತ್ತಿದ್ದ ಕೃಷಿಕರಿಗೆ ರಕ್ಷಣೆ ನೀಡಲಾಗುತ್ತಿತ್ತು ಎಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ,
ಜಿಲ್ಲೆಯಲ್ಲಿ ಪ್ರಥಮವಾಗಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಿದ್ದು, ಪ್ರತಿ ತಾಲೂಕಿನಲ್ಲಿ ಮಾಡುವಂತೆ ಹೈ ಕಮಾಂಡ್ ಸೂಚಿಸಿದೆ ಎಂದರು.. ಶಿಕ್ಷಣ ದಲ್ಲೂ ಕೇಸರಿಕರಣ ಮಾಡಿದ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಗಿ ಮಾತನಾಡಿದರು.

ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ ದಾಸ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಬಡವರ ಪರವಾಗಿ ಕೆಲಸ ಮಾಡುವ ಬಲಿಷ್ಠ ಜಾತ್ಯತೀತ ಪಕ್ಷ ವಾಗಿ ಕಾಂಗ್ರೇಸ್ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದ ಹಿಂದುಳಿದ ದುರ್ಬಲ ವರ್ಗಗಳ ಪರವಾಗಿ ಶಕ್ತಿ ನೀಡುವ ಕೆಲಸ ಕಾಂಗ್ರೇಸ್ ಪಕ್ಷ ನಿಂತಿದೆ. ಭೂ ಮಸೂದೆ ಕಾನೂನು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಯಾದ ಜಿಲ್ಲೆಯಿದ್ದರೆ ಅದು ದ.ಕ‌.ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.
‌‌ ಉಳುವವನೆ ಹೊಲದೊಡೆಯ ಕಾನೂನಿನಲ್ಲಿ ಅತ್ಯಂತ ಹೆಚ್ಚು ಭೂಮಿ ಪಡೆದುಕೊಂಡವರಿದ್ದರೆ ಅದು ಹಿಂದುಳಿದ ವರ್ಗಗಳ ಜನತೆ ಎಂದು ಅವರು ಹೇಳಿದರು
ಋಣಪರಿಹಾರ ಕಾಯ್ದೆ ಯನ್ನು ಜಾರಿ ಮಾಡಿದ್ದು ಕಾಂಗ್ರೇಸ್ ಪಕ್ಷ ಎಂದು ಅವರು ಹೇಳಿದರು.
ಜೀತ ಪದ್ದತಿಯನ್ನು ರದ್ದತಿ ಮಾಡಿ, ಬಡವರಿಗೆ ಬದುಕು ನೀಡಿದ್ದು ಕಾಂಗ್ರೇಸ್ ಪಕ್ಷ.
ಧರ್ಮ ದೇವರ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ, ಭಾವನಾತ್ಮಕ ವಿಚಾರದ ಮೂಲಕ ಮನುಷ್ಯ ಮನುಷ್ಯರ ನಡುವೆ ಧ್ವೇಷ ಉಂಟಾಗಿಸಿ ಗಲಾಟೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಇಷ್ಟೆಲ್ಲಾ ಸವಲತ್ತುಗಳನ್ನು ನೀಡಿದ ಕಾಂಗ್ರೇಸ್ ಪಕ್ಷದ ಋಣ ನಮ್ಮ ಮೇಲಿದ್ದು, ತೀರಿಸುವ ಕೆಲಸ ಆಗಬೇಕಾಗಿದೆ.

ಕೆ.ಪಿ.ಸಿ.ಸಿ‌.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ , ಮಾಜಿ ಕೆ.ಪಿ.ಸಿ.ಸಿ. ಮಾಜಿ ಸದಸ್ಯ ಪೃಥ್ವಿರಾಜ್ ಅರ್.ಕೆ. ಹಿಂದುಳಿದ ವರ್ಗಗಳ ರಾಜ್ಯ ಸಮಿತಿ ಸದಸ್ಯ ಗಣೇಶ್ ಪೂಜಾರಿ, ಮುಖ್ಯ ಕಾರ್ಯದರ್ಶಿ ಮಲ್ಲಿಕಾ ಪಕಳ, ಪಿಯೂಸ್ ರೊಡ್ರಿಗಸ್, ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿ.ಸೋಜ, ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ,ಸಂಚಾಲಕ ಮಾಯಿಲಪ್ಪ ಸಾಲ್ಯಾನ್,, ಯುವ ಕಾಂಗ್ರೇಸ್ ಅಧ್ಯಕ್ಷರುಗಳಾದ ಸುರೇಶ್ ಜೋರ, ಮಹಮ್ಮದ್ ನವಾಜ್ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಪ್ರಮುಖರಾದ ಸುದರ್ಶನ್ ಜೈನ್, ಸುಭಾಶ್ಚಂದ್ರ, ಚಿತ್ತರಂಜನ್ ಶೆಟ್ಟಿ, ಅಬ್ಬಾಸ್ ಆಲಿ, ಪದ್ಮನಾಭ ರೈ, ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ಹಿಂದುಳಿದ ವರ್ಗಗಳ ಬಂಟ್ವಾಳ ಬ್ಲಾಕ್ ಘಟಕದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ, ಹಿಂದುಳಿದ ವರ್ಗಗಳ ಪಾಣೆಮಂಗಳೂರು ಬ್ಲಾಕ್ ಘಟಕದ ಅಧ್ಯಕ್ಷ ರಮೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here