Saturday, April 6, 2024

ಸರಕಾರಿ ಅಧಿಕಾರಿಗಳ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಕೊಲೆ ಬೆದರಿಕೆ: ಆರೋಪಿ ಬಂಧನ

ಬಂಟ್ವಾಳ: ಕ್ಷಲ್ಲಕ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರನೋರರ್ವ ಸರಕಾರಿ ವಾಹನವೊಂದರ ಮಿರರ್ ಪುಡಿ ಮಾಡಿದ್ದಲ್ಲದೆ ಕಾರಿನಲ್ಲಿದ್ದ ಸರಕಾರಿ ಅಧಿಕಾರಿಗಳಿಗೆ ಹಲ್ಲೆಗೆ ಮುಂದಾಗಿ ಅವ್ಯಾಚ್ಚ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ ಘಟನೆ ಇಂದು ಬೆಳಿಗ್ಗೆ ತುಂಬೆ ಎಂಬಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ..

ಸಜೀಪ ಕೊಣೆಮಾರ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಮಂಗಳೂರು ಜಿ.ಪಂ.ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ದೇವದಾಸ್ ಅವರು ಜಿ.ಪಂ.ಇಲಾಖೆಯ ಅಧಿಕಾರಗಳನ್ನು ಮಂಗಳೂರಿನಿಂದ ಪುತ್ತೂರು ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿತ್ತು.

ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ ನಲ್ಲಿ ಭಾಗವಹಿಸಲು ಮೂವರು ಅಧಿಕಾರಿಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿತ್ತು.

ಎದುರಿನ ವಾಹನ ವೊಂದು ಬ್ರೇಕ್ ಹಾಕಿದ್ದಾರೆ ಎಂಬ ಕಾರಣಕ್ಕೆ ಜಿ.ಪಂ.ಇಲಾಖೆಯ ವಾಹನ ಚಾಲಕ ಜಗದೀಶ್ ಅವರು ಕೂಡ ಬ್ರೇಕ್ ಹಾಕಿದ್ದಾರೆ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕ ಕಾರಿನ ಹಿಂಬದಿಯಲ್ಲಿದ್ದು ಆತ ಕೂಡ ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ಈ ಕಾರಣಕ್ಕಾಗಿ ಆತ ಕಾರಿಗೆ ದ್ವಿಚಕ್ರವಾಹನವನ್ನು ಅಡ್ಡ ಇಟ್ಟು ತಡೆಒಡ್ಡಿ ಬಳಿಕ ಕಾರಿನ ಮಿರರ್ ಅನ್ನು ಪುಡಿಮಾಡಿದ್ದಾನೆ . ಅ ಬಳಿಕ ಚಾಲಕ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬುದು ಕೊಲೆ ಬೆದರಿಕೆ ಹಾಕಿದ್ದ.  ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

More from the blog

ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ

ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಆಡಳಿತ ಸೌಧದಿಂದ ಹಮ್ಮಿಕೊಂಡ ಜಾಥಾ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ...

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ, ಡೊಂಬಯ...

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...