ಡ್ರೈವರ್ ಎಂದರೆ ಸಾಮಾನ್ಯವಾಗಿ ಸ್ವಲ್ಪ ಮಟ್ಟಿಗೆ ತಾತ್ಸಾರವೇ ಎಲ್ಲರಿಗೂ. ಒಂದು ಹನಿ ಕೆಸರ ನೀರು ನಮ್ಮ ಅರಿವೆಗೆ ಮುಟ್ಟಿದಲ್ಲಿಂದ ಬೇರೆ ಜೀವ ಉಳಿಸಲು ಕೊಂಚ ಬ್ರೇಕ್ ಹಾಕಿದಾಗ ಸ್ವಲ್ಪ ಹೆಜ್ಜೆ ತಪ್ಪುವಲ್ಲಿವರೆಗೆ ಡ್ರೈವರ್ ಗೆ ಬೈಗುಳದ ಜೊತೆ ಶಪಿಸಲು ಎಲ್ಲರೂ ರೆಡಿ ಇರುವಂತ ಈ ದಿನಗಳಲ್ಲಿ, ಪ್ರತೀ ದಿನ ಪ್ರತೀ ಕ್ಷಣ ಬಸ್ಸಿನಲ್ಲಿ ಅಗಾಧ ಕನಸ್ಸುಗಳನ್ನು ಹೊತ್ತು ಬರುವ ಅದೆಷ್ಟೋ ಬಡಜನರಿಗೆ, ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಿಗೆ, ಅರಿವಿರದೇ ಜವಬ್ದಾರಿ ಹೊತ್ತು ಅವರಂದ ಜಾಗಕ್ಕೆ ಜಾಗರೂಕತೆಯಿಂದ ತಲುಪಿಸುವ ದೇವರ ಸ್ವರೂಪಯೇ ಈ ಡ್ರೈವರ್.

ಈ ವೀಡಿಯೋ ದಲ್ಲಿ ಕಾಣುವ ಪರಿಚಿತ ಮುಖ ನಮ್ಮೂರಿನ ಕೂಸಪ್ಪಣ್ಣ. ಮಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿ ಅವರ ನಿಸ್ವಾರ್ಥ ಕಾಳಜಿ, ಸೇವೆ, ಸರಳತೆ, ನಿಷ್ಕಲ್ಮಷತೆಯನ್ನು ಗುರುತಿಸಿ ಕೊಟ್ಟಂತಹ ಅಭಿಮಾನ, ಭಕ್ತಿಯ ಸನ್ಮಾನ.

ಸಹೋದರರೇ ನಮ್ಮೂರ ಈ ಮಹಾನ್ ವ್ಯಕ್ತಿ ನಮ್ಮೂರ ಹೆಮ್ಮೆ‌. ಅದಲ್ಲದೇ ಇದೊಂದು ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ವೀಡಿಯೋ ಎಂಬುದು ನಮಗೆಲ್ಲ ಹೆಮ್ಮೆ. ಇದನ್ನು ನಮ್ಮವರಿಗೆಲ್ಲ ಹಂಚೋಣ. ಅವರನ್ನು ಪ್ರತಿಯೊಬ್ಬನಿಗೂ ಮಾದರಿ ಮಾಡೋಣ.

ಜೈ ಕೂಸಪ್ಪಣ್ಣ🙇‍♀️🙏🙏🙏🙏

-ಯಶು ಸ್ನೇಹಗಿರಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here