ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಉಂಟಾಗಿರುವ ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ದು, ಜಿಲ್ಲೆಯ ಕೇರಳದ ಗಡಿಭಾಗದ ಜತೆಗೆ ಕೆಲವೊಂದು ಆಯಕಟ್ಟಿನ ಸ್ಥಳಗಳಲ್ಲೂ ದಿನದ ೨೪ ಗಂಟೆಯೂ ತಪಾಸಣೆ ಮುಂದುವರಿಸಿದೆ.
ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಬಂಟ್ವಾಳದ ಹಲವು ಭಾಗಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಪೊಳಲಿ, ಫರಂಗಿಪೇಟೆ, ಮಣಿಹಳ್ಳ ಮೊದಲಾದ ಪ್ರದೇಶಗಳ ಜತೆಗೆ ಗಡಿ ಸಮೀಪದ ಗ್ರಾಮಗಳಾದ ಮಂಚಿ, ಸಾಲೆತ್ತೂರುಗಳಲ್ಲೂ ತಪಾಸಣೆ ಮುಂದುವರಿದಿದೆ. ಜತೆಗೆ ಉನ್ನತ ಅಧಿಕಾರಿಗಳು ಸೇರಿದಂತೆ ಇನ್ಸ್‌ಪೆಕ್ಟರ್ ಗಳು, ಪಿಎಸ್ಐಗಳ ರೌಂಡ್ಸ್ ಕರ್ತವ್ಯದ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದು ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕರ್ತವ್ಯ ನಿರತರಾಗಿದ್ದಾರೆ.