ಬಂಟ್ವಾಳ: ದ.ಕ.ಜಿಲ್ಲೆಯ ಬೆಳ್ಳಾರೆ ಹಿಂದೂ ಸಂಘ ಟನೆ ಹಾಗೂ ಬಿಜೆಪಿ ಪ್ರಮುಖ ನೆಟ್ಟಾರು ಪ್ರವೀಣ್ ಕೊಲೆಯ ಬೆನ್ನಲ್ಲೆ ಸುರತ್ಕಲ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಗಂಭೀರ ಸ್ವರೂಪದ ಗಾಯಗಳಾಗಿ ಜೀವನ್ಮರಣ ಹೋರಾಟದಲ್ಲಿ ರುವ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಸುರತ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆ ಯತ್ನಕ್ಕೆ ಕಾರಣ ಸ್ಪಷ್ಟವಾಗಿ ಕಂಡು ಬಂದಿಲ್ಲ.
*ಬಂಟ್ವಾಳದಲ್ಲಿ ಬಿಗಿಬಂದೋಬಸ್ತ್*
ಎರಡು ಘಟನೆಯ ಬಳಿಕ ದ.ಕ.ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಕೋಮುಸೂಕ್ಷ್ಮ ಬಂಟ್ವಾಳ ತಾಲೂಕಿನಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹಾಸನ ಎಸ್.ಪಿ.ಹರಿರಾಂ ಶಂಕರ್ ಅವರು ಬಂಟ್ವಾಳದಲ್ಲಿ ತಂಗಿದ್ದು, ಇವರಿಗೆ ಬಂಟ್ವಾಳ ತಾಲೂಕಿನ ಕಾನೂನು ಸುವ್ಯವಸ್ಥೆಯನ್ನು ಬಿಗಿ ಮಾಡಲು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಬಂಟ್ವಾಳದ ಸುತ್ತ ಮುತ್ತ ಹೆಚ್ಚುವರಿ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ.