ಬಂಟ್ವಾಳ: ಅಮ್ಟಾಡಿ ಗ್ರಾಮದ ಅಜೆಕಲದ ವಿಶ್ವಕರ್ಮ ಸಭಾಭವನದಲ್ಲಿ ಜು. ೧೬ರಂದು ಬೆಳಿಗ್ಗೆ ೧೦ಕ್ಕೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಗ್ರಾಮವಾಸ್ತವ್ಯ ಕಾರ್ಯಕ್ರಮವು ನಡೆಯಲಿದ್ದು, ತಾಲೂಕು ಮಟ್ಟದ ಎಲ್ಲಾ ಇಲಾಖಾಽಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಂದಾಯ ಹಾಗೂ ಇತರ ಇಲಾಖೆಗಳ ಸವಲತ್ತುಗಳ ವಿತರಣೆ, ಇಲಾಖೆಗೆ ಸಂಬAಽಸಿದ ಸಮಸ್ಯೆಗಳ ಕುರಿತು ಸಂಬAಧಪಟ್ಟ ಇಲಾಖಾ ಮುಖ್ಯಸ್ಥರೊಂದಿಗೆ ಸಮಾಲೋಚನೆಗೆ ಅವಕಾಶವಿರುತ್ತದೆ. ಗ್ರಾಮಸ್ಥರ ಅಹವಾಲುಗಳಿದ್ದರೆ ಜು. ೧೪ರೊಳಗೆ ಗ್ರಾ.ಪಂ.ನ ದೂರುಪೆಟ್ಟಿಗೆ, ಗ್ರಾಮಲೆಕ್ಕಿಗರು ಅಥವಾ ತಾಲೂಕು ಕಚೇರಿಗೆ ಖುದ್ದಾಗಿ ನೀಡುವಂತೆ ತಹಶೀಲ್ದಾರ್ ಡಾ| ಸ್ಮಿತಾ ರಾಮು ತಿಳಿಸಿದ್ದಾರೆ.