ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ ಬುಧವಾರ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕೆಜಿ ತರಗತಿಗಳು ಆರಂಭೋತ್ಸವ ನಡೆಯಿತು.
ಆರಂಭೋತ್ಸವ ಸಂಭ್ರಮದಲ್ಲಿ 3 ವರ್ಷ 10 ತಿಂಗಳು ಮೇಲ್ಪಟ್ಟ ಪುಟಾಣಿಗಳು ಉತ್ಸಾಹದಿಂದ ಅವರ ಹೆತ್ತವರೊಂದಿಗೆ ಉಪಸ್ಥಿತರಿದ್ದರು. ಪುಟಾಣಿಗಳನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಹಾಗೂ ಪುಷ್ಪ ವೃಷ್ಠಿಯ ಮುಖಂತರ ಸ್ವಾಗತಿಸಿದರು .
ಈ ಪ್ರಾರಂಭೋತ್ಸವದಲ್ಲಿ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತಾಧಿಕಾರಿ, ಪ್ರಾಂಶುಪಾಲರು ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.