Friday, April 19, 2024

ಶಂಕಿತ ಡೆಂಗ್ಯೂ ಜ್ವರಕ್ಕೆ ವಾಮದಪದವಿನ ಕೃಷಿಕ ಯುವಕ ಬಲಿ

ಬಂಟ್ವಾಳ ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಬಲಿಯಾಗಿದ ಘಟನೆ ಜೂನ್ 9 ರಂದು ನಡೆದಿದೆ.
ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ (31) ಮೃತಪಟ್ಟ ಯುವಕ.

ಜ್ವರದಿಂದ ಬಳಲುತ್ತಿದ್ದ ಆತ ಕಳೆದ ಕೆಲವು ದಿನಗಳಿಂದ ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 9 ರಂದು ಮೃತಪಟ್ಟಿದ್ದಾನೆ.
ಸಂದೀಪ್ ಅವರ ತಂದೆ ಹಳ್ಳಿ ವೈದ್ಯನಾಗಿ ಸೇವೆ ಸಲ್ಲಿಸಿದರೆ , ತಾಯಿ ಪುಷ್ಪಾವತಿ ವಾಮದಪದವು ಗ್ರಾಮಪಂಚಾಯತ್ ಸದಸ್ಯರಾಗಿದ್ದಾರೆ.
ಸಂದೀಪ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸಿದ್ದಕಟ್ಟೆ ರೋಟರಿ ಸದಸ್ಯ ಹಾಗೂ ವಾಮದಪದವು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು.
ಇತ್ತೀಚಿಗೆ ಮದುವೆಯಾಗಿದ್ದು ಒಂದು ವರ್ಷ ಮಗು ,ಪತ್ನಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ
ಬಂಟ್ವಾಳ ತಾಲೂಕಿನ ಲ್ಲಿ ಸುಮಾರು 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ! ನವೀನ್ ಚಂದ್ರ ಕುಲಾಲ್ ಮಂಗಳೂರು ಅವರು ತಿಳಿಸಿದ್ದಾರೆ.
ಕಣ್ಣುಮುಚ್ಚಾಳೆಯ ಆಟದಂತೆ ಸುರಿಯುವ ಮಳೆಗೆ ಹಾಗೂ ಅಜಾಗರೂಕತೆಯಿಂದ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರು ಹೆಚ್ಚಿನ ಮುಂಜಾಗ್ರತಾ ‌ಕ್ರಮಗಳನ್ನು ವಹಿಸಬೇಕಾಗಿದೆ.

More from the blog

ಜನಪರವಾದ ಕೆಲಸ ಮಾಡದ ಬಿಜೆಪಿಗೆ ಸೋಲು ಖಚಿತ-ಚಾಮರಸ ಮಾಲೀಪಾಟೀಲ್

ಬಂಟ್ವಾಳ: 2024 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷವನ್ನು ಸೋಲಿಸುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಮಾಡಿದ್ದು, ಈ ದೃಷ್ಟಿಯಿಂದ ರೈತರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ, ಈ ಬಾರಿ ಬಿಜೆಪಿ ನೆಲಕಚ್ಚುವುದು...

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ದಿನಾಂಕ 19-04-2024 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರು. ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ...

ಟ್ಯಾಂಕರ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್ ಎನ್ನಲಾಗಿದೆ ಯಾದವ್ ರಸ್ತೆ ಬದಿ‌ ನಡೆದುಕೊಂಡು...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...