Tuesday, April 23, 2024

ಪುದು ಗ್ರಾ.ಪಂ.ನ ತ್ಯಾಜ್ಯ ಅಮ್ಟಾಡಿ ಗ್ರಾ.ಪಂ.ನ ವ್ಯಾಪ್ತಿಯಲ್ಲಿ ಡಂಪ್: ತ್ಯಾಜ್ಯ ಡಂಪ್ ಮಾಡಿದವರ ಮೇಲೆ ಸಾವಿರಾರು ದಂಡ ವಿಧಿಸಿದ ಗ್ರಾ.ಪಂ

ಬಂಟ್ವಾಳ: ಗ್ರಾಮ ಪಂಚಾಯತ್ ಒಂದರ ತ್ಯಾಜ್ಯ ವನ್ನು ಇನ್ನೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಪ್ ಮಾಡಿ ಪರಾರಿಯಾದ ಗುತ್ತಿಗೆದಾರ , ತ್ಯಾಜ್ಯ ಡಂಪ್ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಗ್ರಾ.ಪಂ.ಅತನಿಂದಲೇ ತ್ಯಾಜ್ಯ ವನ್ನು ವಾಪಾಸು ತೆಗೆಸಿದ್ದಲ್ಲದೆ,ಸಾವಿರಾರು ರೂ ದಂಡ ವಿಧಿಸಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗೆ ಪಾತ್ರವಾಗಿದೆ.
ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ಎಂಬಲ್ಲಿ ಈ ಘಟನೆ ಸಂಭವಿಸಿದೆ.

ಗುರುವಾರ ರಾತ್ರಿ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ರಸ್ತೆ ಬದಿ ಯಲ್ಲಿ ರಾಶಿ ಗಟ್ಟಲೆ ಕಸವನ್ನು ಯಾರೋ ವಾಹನದಲ್ಲಿ ಬಂದು ಎಸೆದು ಹೋದ ಬಗ್ಗೆ ಗ್ರಾ.ಪಂ.ಗೆ ಸ್ಥಳೀಯ ರು ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಕಸ ಡಂಪ್ ಮಾಡಿದ ಬಗ್ಗೆ ಮಾಹಿತಿ ‌ಕಲೆಹಾಕಲು ಗ್ರಾ.ಪಂ.ಪಿ.ಡಿ.ಒ.ರವಿ ಮುಂದಾದರು.
ಯಾವುದೇ ಸುಳಿವು ಸಿಗದೇ ಇದ್ದಾಗ ಗ್ರಾ.ಪಂ.ನ ಬಿಲ್ ಕಲೆಕ್ಟರ್ ಚೇತನ್ ಎಂಬವರು ತ್ಯಾಜ್ಯ ದಲ್ಲಿ ಯಾವುದಾದರೂ ಸುಳಿವು ಸಿಗಬಹುದು ಎಂದು ಹುಡುಕಾಟ ನಡೆಸಿದ್ದಾರೆ.
ಹೀಗೆ ಹುಡುಕಾಡಿದಾಗ ಪರಂಗಿಪೇಟೆ ಬಾರ್ ಒಂದರ ಬಿಲ್ ಪತ್ತೆ ಯಾಗಿತ್ತು. ಅ ಬಿಲ್ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದಾಗ ಅದು ಪುದು ಗ್ರಾ.ಪಂ.ನ ತ್ಯಾಜ್ಯ ಎಂದು ಖಾತ್ರಿ ಯಾಯಿತು.
ಅಬಳಿಕ ಪುದು ಗ್ರಾಮಪಂಚಾಯತ್ ನ್ನು ಸಂಪರ್ಕ ಮಾಡಿ ವಿಚಾರ ತಿಳಿಸಿದಾಗ ಅವರು ಅಲ್ಲಿನ ತ್ಯಾಜ್ಯ ವಿಲೇವಾರಿ ಯನ್ನು ಸ್ಥಳೀಯ ವ್ಯಕ್ತಿಯೋರ್ವನಿಗೆ ಗುತ್ತಿಗೆ ನೀಡಲಾಗಿದ್ದು ಆತ ಕಸವನ್ನು ವಾಹನದ ಮೂಲಕ ಇಲ್ಲಿ ಡಂಪ್ ಮಾಡಿ ಹೋಗಿರುವ ಬಗ್ಗೆ ಸತ್ಯ ವಿಚಾರ ತಿಳಿದ ಬಳಿಕ ಗುತ್ತಿಗೆ ದಾರರನ್ನು ಕರೆಯಿಸಿ ಅತನಿಂದಲೇ ಕಸವನ್ನು ತೆಗೆಸಿದ್ದಲ್ಲದೆ ಅತನಿಗೆ 5000 ಸಾವಿರ ರೂ ದಂಡವನ್ನು ವಿಧಿಸಿದ್ದಾರೆ.

ತಾಜ್ಯವನ್ನು ಅವರಿಂದಲೇ ತೆಗೆಸಿ 5000/- ದಂಡ ಕಟ್ಟಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರವಿ. ಬಿ ಹಾಗು ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಅವರಿಗೆ ಇಡೀ ಗ್ರಾಮದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಮಾದರಿ ಇತರ ಗ್ರಾ.ಪಂ. ಹಾಗೂ ಪುರಸಭೆಯಲ್ಲಿ ನಡೆದರೆ ತ್ಯಾಜ್ಯ ಮುಕ್ತ ಸುಂದರ ಬಂಟ್ವಾಳ ನಿರ್ಮಾಣಕ್ಕೆ ಸಹಕಾರಿಯಾಗಬಹುದು…..

More from the blog

ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ...

ವಿಟ್ಲ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ವಂತ ಕಟ್ಟಡಕ್ಕೆ ಸ್ಥಳಾಂತರ 

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ - ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್...

ಚುನಾವಣೆಯಲ್ಲಿ ಆಧಾರರಹಿತವಾಗಿ ಕಡಿಮೆ ಪ್ರಮಾಣದಲ್ಲಿ ಕುಲಾಲರ ಮತದಾರರ ಸಂಖ್ಯೆ ತೋರಿಸಿರುವುದು ಬೇಸರದ ವಿಚಾರ-ಸದಾಶಿವ ಬಂಗೇರ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೇ ಅತಿ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ಜಿಲ್ಲೆಯ ನಿರ್ಣಾಯಯ ಸ್ಥಾನದಲ್ಲಿರುವ ಕುಲಾಲರ ಮತದಾರರ ಸಂಖ್ಯೆ ಅಂದಾಜು ೧.೮೪ ಲಕ್ಷವಾಗಿದೆ. ಆದರೆ ಚುನಾವಣೆಯ...

ಸರಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬಂಟ್ವಾಳ: ಅಪಪ್ರಚಾರ ನಡೆಸುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಮ್ಮ ಕೆಲಸವೇ ಅವರಿಗೆ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಮಣಿನಾಲ್ಕೂರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸರಪಾಡಿಯಲ್ಲಿ ನಡೆದ ಕಾಂಗ್ರೆಸ್...