Wednesday, April 10, 2024

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಚಿಕ್ಕ ಮೇಳದ ಯಕ್ಷಗಾನ ತಿರುಗಾಟ ಆರಂಭ

 

ಬಂಟ್ವಾಳ: ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಚಿಕ್ಕ ಮೇಳದ ಯಕ್ಷಗಾನ ತಿರುಗಾಟಕ್ಕೆ ಬುಧವಾರ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ.
ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿಂತಾಯ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಿಕ್ಕ ಮೇಳಕ್ಕೆ ಪ್ರಸಾದ ನೀಡಿ ಚಾಲನೆ ನೀಡಿದರು.


ಚಿಕ್ಕಮೇಳದ ವ್ಯವಸ್ಥಾಪಕ, ಹಿರಿಯ ಯಕ್ಷಗಾನ ಕಲಾವಿದ ವಿ.ಮನೋಹರ್ ಕುಮಾರ್ ಮಾತನಾಡಿ ಕಲಾವಿದರನ್ನು ಪ್ರೋತ್ಸಾಹಿಸುವುದು, ಕಲಾವಿದರ ಕಲಿಕೆಗೆ ಅವಕಾಶ ನೀಡುವುದು ಮತ್ತು ಯಕ್ಷಗಾನ ಸೇವೆಯ ದೃಷ್ಠಿಯಿಂದ ಈ ತಿರುಗಾಟ ನಡೆಸಲಾಗುತ್ತಿದೆ. ಕಳೆದ ವರ್ಷ 70 ದಿನ ತಿರುಗಾಟ ನಡೆಸಿ ಕ್ಷೇತ್ರದಲ್ಲಿ ನವರಾತ್ರಿ ಸಂದರ್ಭ ಏಳು ದಿನಗಳ ಯಕ್ಷಗಾನ ಸಪ್ತಾಹ ನಡೆಸಲಾಗಿದೆ ಎಂದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಬಂಗೇರಾ, ಸಮಿತಿ ಪ್ರಮುಖರಾದ ಶ್ಯಾಮಪ್ರಸಾದ ಪೂಂಜ, ಮೋಹನದಾಸ ಗಟ್ಟಿ ಪೊರಿಗುಡ್ಡೆ, ಚಂದ್ರಶೇಖರ ರೈ ಪಡಂತರ ಕೋಡಿ, ರಮಣಿ ಸಿ.ರೈ, ರವಿರಾಮ್ ಶೆಟ್ಟಿ ಕಂಚಾರು, ದಯಾನಂದ ಎರ್ಮೆನಾಡು ಮೊದಲಾದವರಿದ್ದರು.
ಚಿಕ್ಕಮೇಳದ ತಂಡದಲ್ಲಿ ಹಿಮ್ಮೇಳದಲ್ಲಿ ಪ್ರಸಾದ್ ಆಚಾರ್ಯ, ಸಂದೇಶ್ ಬೆಳ್ಳೂರು, ಹರಿಪ್ರಸಾದ್ ಇಚ್ಲಂಪಾಡಿ, ವಿಶ್ವನಾಥ ಆಚಾರ್ಯ, ಮುಮ್ಮೇಳದಲ್ಲಿ ಗಂಗಾಧರ ಜೋಗಿ ಪುತ್ತೂರು, ವಿಜಯ ಗಾಣಿಗ ಇದ್ದಾರೆ. ವಸಂತ್ ಕುಮಾರ್ ಮತ್ತು ಮನೋಜ್ ಕುಮಾರ್ ಸಹಕರಿಸುತ್ತಿದ್ದಾರೆ.

*✍🏽ಗೋಪಾಲ ಅಂಚನ್ ಆಲದಪದವು*
ಸಂಪಾದಕರು
*ಯುವಧ್ವನಿ ನ್ಯೂಸ್*
9449104318

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...