ನೇತ್ರಾವತಿ ನದಿಯಲ್ಲಿ ಮೊಸಳೆ ಇದೆ ಈಜಲು ಹೋಗುವವರು ಅಥವಾ ನದಿ ಬದಿಗೆ ಹೋಗುವವರು ಹೆಚ್ಚಿನ ಜಾಗೃತೆ ವಹಿಸುವಂತೆ ಹೇಳಿದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ನೇತ್ರಾವತಿ ನದಿಯಲ್ಲಿ ಮೊಸಳೆ ಕಂಡು ನದಿ ಬದಿಯ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಬಂಟ್ವಾಳ ಸರಪಾಡಿ ನದಿ ಬದಿಯಲ್ಲಿ ಈ ಮೊಸಳೆ ಕಂಡು ಬಂದಿದೆ ಎಂದು ಹೇಳಕಾಗುತ್ತಿದೆ.
ಇದು ನೇತ್ರಾವತಿ ನದಿಯ ಬಂಟ್ವಾಳ ದಲ್ಲಿನ ವಿಡಿಯೋ ಹೌದ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿ ಯವರಲ್ಲಿ ವಿಚಾರಿಸಿ ದಾಗ ಅ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿರುವ ಬಗ್ಗೆ ಮಾತ್ರ ತಿಳಿದಿದೆ.ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಇಷ್ಟಕ್ಕೂ ಅದು ಮೊಸಳೆ ಯೋ ಅನ್ನುವ ಬಗ್ಗೆ ಖಚಿತವಾಗ ಬೇಕಾಗಿದೆ.