ಮಂಗಳೂರು:- ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದ ಎದುರು ಶಮಿತ್ ಸುವರ್ಣ ಎಂಬವವರಿಗೆ ಕಟ್ಟಡ ಕೆಲಸ ನಿರ್ಮಾಣ ಹಂತದಲ್ಲಿ ಸಿಕ್ಕಿದ್ದ ಮೊಟ್ಟೆಯನ್ನು ಉರಗ ಪ್ರೇಮಿ ಅಜಯ್ ಗೆ ಮಾಹಿತಿಯನ್ನು ನೀಡಿದರು ಅಜಯ್ ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಕೃತಕ ಕಾವು ಕೊಟ್ಟು ಬಳಿಕ ಹೊರಬಂದ ೮ ಹೆಬ್ಬಾವು ಮರಿಗಳನ್ನು
ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಮಾರ್ಗದರ್ಶನದಂತೆ ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.ಪೂಜಾರಿ, ಅರಣ್ಯ ರಕ್ಷಕ ಶೋಬಿತ್ ರಾಜ್, ಅಜಯ್, ಉರಗ ರಕ್ಷಕ ಸ್ನೇಕ್ ಕಿರಣ್ ,ವಾಹನ ಚಾಲಕ ಜಯರಾಮ್ ಉಪಸ್ಥಿತರಿದ್ದರು.