Sunday, April 14, 2024

ಬಿಜೆಪಿ ಗೆಲ್ಲಬೇಕು ಎಂಬ ಮನಸ್ಸಿನವರು ಕಾಂಗ್ರೇಸ್, ಜೆಡಿಎಸ್ ನಲ್ಲೂ ಇದ್ದಾರೆ: ಸಿ.ಟಿ.ರವಿ

ಬಂಟ್ವಾಳ: ಭಾರತೀಯ‌ ಜನತಾ‌ ಪಕ್ಷ ಯಾವುದೇ ರಾಜಕೀಯ ಪಾರ್ಟಿಯನ್ನು ಎ ಟೀಮ್‌ ಅಥವಾ ಬಿ‌ ಟೀಮ್‌ ಆಗಿ‌ಇಟ್ಟುಕೊಂಡಿಲ್ಲ,‌ನಮ್ಮದೇನಿದ್ದರೂ, ಜನರೊಂದಿಗೆ ಬೆಳೆದು ಬಂದ ಪಕ್ಷ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಬಂಟ್ವಾಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ‌ ಅವರು, ಚುನಾವಣೆ ಮತ್ತು ಮತದಾನದ ಸಂದರ್ಭ ಒಲವು ಬದಲಾವಣೆಗಳಾಗುತ್ತದೆ, ರಾಮಾಯಣ ಕಾಲದಲ್ಲಿಯೂ ವಿಭೀಷಣನ ಪರ ಒಲವು ತೋರಿಸಿದ್ದ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದ ಅವರು, ಬಿಜೆಪಿ ಗೆಲ್ಲಬೇಕುಬೆನ್ನುವ ಮನಸ್ಸಿನವರು‌ ಕಾಂಗ್ರೇಸ್ ನಲ್ಲಿಯೂ ಇದ್ದಾರೆ, ಜೆಡಿಎಸ್ ನಲ್ಲಿಯೂ ಇದ್ದಾರೆ ಎಂದರು. ಪಕ್ಷಾಂತರ ಪರ್ವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದು ಸಹಜ, ಇಲ್ಲಿ ಕೂಡೋ‌ಲೆಕ್ಕಕ್ಕೆ ಯಶಸ್ಸು ಇದೆಯೇ ವಿನಃ ಕಳೆಯುವುದಕ್ಕಲ್ಲ ಎಂದರು. ಪಠ್ಯ ಪುಸ್ತಕ ವಿವಾದ ಕುರಿತ ವಿಶ್ವನಾಥ್ ಹೇಳಿಕೆ‌ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯ ಪುಸ್ತಕ ಸರಿ‌ಇಲ್ಲ ಎನ್ನುವವರು, ಪಠ್ಯ ಪುಸ್ತಕವನ್ನು ಓದಿ, ಬಳಿಕ ಮಾತನಾಡಲಿ, ಯಾರ್ಯಾರದೋ ಮಾತು ಕೇಳಿ ಮಾತನಾಡಬಾರದು ಎಂದರು.

More from the blog

ಪ್ರಧಾನಿ ಮೋದಿ ರೋಡ್ ಶೋಗೆ ಸಿದ್ಧತೆ : ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶನಿವಾರ ಸಂಜೆಯಿಂದಲೇ ಪೊಲೀಸರು ಕಾರ್ಯ ನಿರತರಾಗಿದ್ದು, ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ಪಿಜಿ ಅಧಿಕಾರಿಗಳು ರೋಡ್‌ ಶೋ...

ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ ಪ್ಲಾಸ್ಟಿಕ್ ಪತ್ತೆ….! ತ್ಯಾಜ್ಯ ಜೀರ್ಣವಾಗದೆ ಮೊಸಳೆ ಸಾವು

ಸುಬ್ರಹ್ಮಣ್ಯ: ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು...

ಬೋಳಾರ ಚೂರಿ ಇರಿತ ಪ್ರಕರಣ : ಆರೋಪಿ ಅರೆಸ್ಟ್

ಮಂಗಳೂರು: ಬೋಳಾರ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಆನಂದ್‌ ಸಪಲ್ಯ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬೋಳಾರ್ ನಲ್ಲಿ ಕಟಿಂಗ್ ಶಾಪ್ ನಡೆಸುತ್ತಿರುವ ಎಡ್ವಿನ್ ವಿನಯ್ ಕುಮಾರ್ ಅವರಿಗೆ...

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ‌ ಮೃತದೇಹವೊಂದು ಸಜೀಪ ನಡು ಎಂಬಲ್ಲಿ ರಿಕ್ಷಾ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸಜೀಪ ನಡು ಗ್ರಾಮದಲ್ಲಿ ನ ರಿಕ್ಷಾ ನಿಲ್ದಾಣದಲ್ಲಿ ಸುಮಾರು 45 ವರ್ಷದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಯಾವ ಕಾರಣದಿಂದ ಈತ...