Tuesday, April 9, 2024

ಚೆಂಡ್ತಿಮಾರ್ ಅಪಘಾತದಲ್ಲಿ ನಾಪತ್ತೆಯಾಗಿದ್ದ ಲಕ್ಷಾಂತರ ರೂ ನಗದು ನಾಟಕೀಯ ರೀತಿಯಲ್ಲಿ ಪತ್ತೆ

ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳದ ಚಂಡ್ತಿಮಾರಿನಲ್ಲಿ ಕಾರು ಹಾಗೂ ಟ್ಯಾಂಕರ್ ಮಧ್ಯೆ ನಡೆದ ಅಪಘಾತದ ವೇಳೆ ಕಾರಿನಲ್ಲಿದ್ದ 2.3 ಲಕ್ಷ ರೂ.ನಗದು ಹಾಗೂ ದಾಖಲೆ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಸ್ತುತ ಅದು ಕಾರಿನಲ್ಲೇ ನಾಟಕೀಯ ರೀತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಮನೆಯವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ .

ಜೂ. ೧ರಂದು ನಡೆದ ಅಪಘಾತದಲ್ಲಿ ಮಡಂತ್ಯಾರು ನಿವಾಸಿ ಕಾರು ಚಾಲಕ ರೋಶನ್ ಸೆರಾವೊ ಅವರು ಮೃತಪಟ್ಟಿದ್ದು, ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದ ಅವರು ಮುನ್ನಾ ದಿನ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಹಣವನ್ನು ಪಡೆದು ಮನೆಗೆ ಹಿಂತಿರುತ್ತಿದ್ದರು. ಕಾರು ಚಂಡ್ತಿಮಾರ್‌ನಲ್ಲಿ ಅಪಘಾತಗೊಂಡ ಬಳಿಕ ಪರಿಶೀಲನೆ ನಡೆಸಿದಾಗ ಹಣ ಹಾಗೂ ದಾಖಲೆ ಅದರಲ್ಲಿ ಸಿಕ್ಕಿರಲಿಲ್ಲ. ಹೀಗಾಗಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ ಕಾರಿನ ನೂತನ ತಂತ್ರಜ್ಞಾನದಲ್ಲಿ ಅಪಘಾತ ಸಂಭವಿಸಿದಾಗ ಡಾಶ್ ಬೋರ್ಡಿನ ಡ್ರಾಯರ್ ಒಳಗೆ ಮಗುಚಿಕೊಳ್ಳುತ್ತದೆ. ಆ ಪ್ರಕಾರ ತನಿಖೆ ನಡೆಸಿದಾಗ ನಗದು, ದಾಖಲೆ ಪತ್ರ ಕಾರಿನಲ್ಲೇ ಇತ್ತು. ಹೀಗಾಗಿ ಅದನ್ನು ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಕಲೈಮಾರ್ ಅವರ ಮಾರ್ಗದರ್ಶನದಲ್ಲಿ ಅರುಣ್ ಫೆರ್ನಾಂಡಿಸ್ ಅವರು ರೋಶನ್ ಅವರ ಪತ್ನಿಗೆ ಹಸ್ತಾಂತರಿಸಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಹಣ ಎಲ್ಲಿ ಹೋಗಿತ್ತು? ಈಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಇದರ ಸೂಕ್ತ ತನಿಖೆಯಾಗಬೇಕಾಗಿದರೆ ಸತ್ಯಾಂಶ ಹೊರಬೀಳಬಹುದು ಎಂದು ಸಾರ್ವಜನಿಕ ರು ಮಾತನಾಡುತ್ತಿದ್ದಾರೆ.
*ಇದರ ಜೊತೆ ಸಾರ್ವಜನಿಕರಲ್ಲಿ ಕೆಲವೊಂದು ಪ್ರಶ್ನೆ ಗಳು ಮೂಡಿವೆ*
ಅಪಘಾತ ನಡೆದ ಬಳಿಕ ಹಣ ಮತ್ತು ದಾಖಲೆ ಪತ್ರಗಳು ಕಾಣೆಯಾದ ಬಗ್ಗೆ ಪೋಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.
ಆದರೆ ದೂರು ನೀಡಿದ 9 ದಿನಗಳ ಬಳಿಕ ಅದೇ ಕಾರಿನಲ್ಲಿ ಹಣ ಪತ್ತೆಯಾಗುತ್ತದಂತೆ, ಅದೂ ಕಾರಿನ ನೂತನ ತಂತ್ರಜ್ಞಾನದಲ್ಲಿ ಅಪಘಾತ ಸಂಭವಿಸಿದಾಗ ಡಾಶ್ ಬೋರ್ಡಿನ ಡ್ರಾಯರ್ ಒಳಗೆ ಮಗುಚಿಕೊಳ್ಳುತ್ತದಂತೆ? ಇದೇನಪ್ಪಾ ಹೊಸ ತಂತ್ರಜ್ಞಾನ ಮಾರುಜಿ ಸುಜಿಕಿ ಕಂಪೆನಿ ಕಾರಿನಲ್ಲಿ ಅದರಲ್ಲೂ ಎಸ್.ಪ್ರೆಶ್ಶೋ     ಮಾಡೆಲ್ ನಲ್ಲಿ…ಕಂಪೆನಿ ಯವರ ಪ್ರಕಾರ ಎಸ್.ಪ್ರೆಶ್ಶೋ     ಕಾರಿನ ಡಾಶ್ ಬೋರ್ಡಿಗೆ ಲಾಕ್ ಸಿಸ್ಟಮ್ ಇಲ್ಲ….ಹಾಗಾಗಿ ಲಾಕ್ ಆಗಲು ಸಾಧ್ಯವಿಲ್ಲ, ಹಾಗೇ ಉಳಿದರೂ ಹಣ ಡಾಶ್ ಬೋರ್ಡ್ ನಿಂದ ಹೊರ ಬರಲು ಬರೋಬ್ಬರಿ 9 ದಿನಗಳು ಯಾಕೆ ಬೇಕಿತ್ತು ? ಈ ಕಾರು ಅಷ್ಟು ದಿ‌ನ ಎಲ್ಲಿತ್ತು, ಅಪಘಾತ ಸಂಭವಿಸಿದ ಸ್ಥಳಕ್ಕೆ ಯಾರು ಯಾರು ಬೇಟಿ ನೀಡಿದ್ದಾರೆ,
ಕಾರುನ್ನು ಪೋಲೀಸ್ ಠಾಣೆಗೆ ತಂದವರು‌ ಯಾರು? ದೂರಿನ ಬಳಿಕ ಕಾರಿನಲ್ಲಿ ಹಣ ಇದೆಯಾ? ಎಂಬುದನ್ನು ನೋಡಿಲ್ಲವೇ? ಇದಕ್ಕೆಲ್ಲ ಉತ್ತರ ಯಾರು ನೀಡುತ್ತಾರೆ.
ಕಾರಿನ ಡೋರ್ ನಲ್ಲಿ ಹಣವನ್ನು ರೋಶನ್ ಸೆರಾವೋ ಅವರು ಇರಿಸಿದ್ದರು ಎಂಬುದರ ಬಗ್ಗೆ ಪೋಲೀಸರಲ್ಲಿ ಸಾಕ್ಷಿಗಳಿವೆ! ಹಾಗಾಗಿ ಡೋರ್ ನಲ್ಲಿರಿಸಿದ್ದ ಹಣದ ಕಟ್ಟು ಡ್ಯಾಸ್ ಬೋರ್ಡ್ ಗೆ ಹೇಗೆ ಹೋಗಿ ಲಾಕ್ ಆಯಿತು ಎಂಬುದು ಅನುಮಾನ? ಹಣವನ್ನು ಅಲ್ಲಿ ಇರಿಸಿದ್ದು ಯಾರು? ಅಪರಾಧ ವಿಭಾಗದ ಎಸ್. ಐ.ಅವರು ಸಾಕ್ಷ್ಯವನ್ನು ಆಧರಿಸಿ ಹಣ ಸಿಗದೆ ಇದ್ದಲ್ಲಿ ಕೆಲವು ವ್ಯಕ್ತಿಗಳ ಮೇಲೆ ಎಫ್.ಐ.ಆರ್ ಮಾಡುತ್ತೇನೆ ಎಂದು ಬೆದರಿಸುವ ಕೆಲಸ ಮಾಡಿದ್ದೇಕೆ? ಬೆದರಿಕೆಗೆ ಮಣಿದು ಹಣ ಕಾರಿನ ಡಾಶ್ ಬೋರ್ಡ್ ನೊಳಗೆ ಮತ್ತೆ ಹೋಯಿತಾ? ಇದೆಲ್ಲರ ಬಗ್ಗೆ ಸಂಪೂರ್ಣ ತನಿಖೆಯಾಗುತ್ತದಾ? ಅಪರಾಧ ವಿಭಾಗದ ಎಸ್.ಐ.ಅವರು ಯಾಕೆ ಮೃದು ಧೋರಣೆ ತೋರಿದರು ಹೀಗೆ ಸಾರ್ವಜನಿಕ ರು ಮಾತನಾಡಿಕೊಳುತ್ತಿದ್ದಾರೆ.
ಅಪಘಾತ ಸಂಭವಿಸಿದ ಸುಮಾರು ಅರ್ಧ ಗಂಟೆಯ ಬಳಿಕ ಮಾಹಿತಿ ಪಡೆದು ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಅದಕ್ಕೂ ಮೊದಲು ಇಲ್ಲಿ ಕಾರಿನೊಳಗೆ ಸಿಲುಕಿಕೊಂಡಿದ್ದ ರೋಶನ್ ಸೆರಾವೊ ಅವರನ್ನು ಹೊರಕ್ಕೆ ತೆಗೆಯಲು ಸಾರ್ವಜನಿಕ ರು ಹರಸಾಹಸ ಪಡುತ್ತಾರೆ.
ಒಂದು ವೇಳೆ ಅ ಸಂದರ್ಭದಲ್ಲಿಯೇ ಹಣ ಕಳ್ಳತನ ವಾಗಿದ್ದರೆ ಮತ್ತೆ ಕಾರಿನ ಡಾಶ್ ಬೋರ್ಡ್ ನೊಳಗೆ ಬಂದದ್ದಾರೂ ಹೇಗೆ? ಇದಕ್ಕಿಂತ ಹೆಚ್ಚಾಗಿ ಅಲ್ಲಿ ಸಿ.ಸಿ.ಕ್ಯಾಮರಾ ಎಲ್ಲವನ್ನು ಸೆರೆ ಹಿಡಿದುಕೊಂಡಿರುವುದರಿಂದ ಪೋಲೀಸರಿಗೆ ಎಲ್ಲಾ ದಾಖಲೆ ಗಳು ಸಿಕ್ಕಿರಬಹುದು? ಆದರೆ ಇಲ್ಲಿ ಪೋಲೀಸರು ಮಾತ್ರ, ಯಾವುದೇ ಮಾಹಿತಿ ಯನ್ನು ಹೊರಹಾಕುತ್ತಿಲ್ಲ.
ನಗರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ಈ ಬಗ್ಗೆ ತನಿಖೆ ನಡೆಸುತ್ತಾರಾ? ಅಥವಾ ಸಾರ್ವಜನಿಕರ ಪ್ರಶ್ನೆಗೆ, ಸಂಶಯಗಳಿಗೆ ಉತ್ತರ ‌ನೀಡುತ್ತಾರಾ? ಎಲ್ಲವನ್ನು ಕಾದುನೋಡಬೇಕಾಗಿದೆ.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...