ಬಂಟ್ವಾಳ: ಮಂಗಳೂರಿನಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ಕಾರ್ಯಕರ್ತ ಮಣಿನಾಲ್ಕೂರು ಗ್ರಾಮ ನಿವಾಸಿ ದಿ.ವಿಜಯ ಪುಣ್ಕೆದಡಿ ಅವರ ಕುಟುಂಬಕ್ಕೆ ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಾಣಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು.
ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಂಘಟನೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ ವಿಜಯ್ ಅವರ ಅಗಲುವಿಕೆ ಸಮಾಜ, ಅವರ ಕುಟುಂಬ ದೊಡ್ಡ ನಷ್ಟವನ್ನೇ ತಂದಿದ್ದು, ಅವರಿಗೊಂದು ಸೂರು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಜತೆಗೆ ಅವರ ಸಹೋದರಿಗೆ ಮಾಣಿಲ ಕ್ಷೇತ್ರದಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಕೈಗೊಂಡು ವಿವಾಹ ಮಾಡಿಸಲು ಬದ್ಧವಾಗಿದ್ದು, ಯಾವುದೇ ದುಶ್ಚಟವಿಲ್ಲದ ವರನನ್ನು ಹುಡುಕುವ ಕಾರ್ಯ ಮಾಡಬೇಕು ಎಂದರು.
ಪುರೋಹಿತ ಸಾಯಿ ಶಾಂತಿ ಕೋಕಲ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಮನೆ ನಿರ್ಮಾಣಕ್ಕೆ ತಿಂಗಳಾಡಿಗುತ್ತಿನವರು ೧೦ ಸೆಂಟ್ಸ್ ಜಾಗ ನೀಡಿದ್ದು, ವಿಹಿಂಪ-ಬಜರಂಗ ದಳ ಜೈ ಹನುಮಾನ್ ಶಾಖೆ ಅಜಿಲಮೊಗರಿನ ಮನವಿಯಂತೆ ಉದ್ಯಮಿ ಸತೀಶ್ ಶೆಟ್ಟಿ ಪಡೀಲು ಅವರು ಪೂರ್ತಿ ಮನೆಯನ್ನು ನಿರ್ಮಿಸಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ದಿ.ವಿಜಯ ಪುಣ್ಕೆದಡಿ ಅವರ ತಂದೆ-ತಾಯಿಯರಾದ ಗುರುವ- ವಿಮಲ ದಂಪತಿ, ವಿಹಿಂಪ ತಾಲೂಕು ಅಧ್ಯಕ್ಷ ಪ್ರಸಾದ್‌ಕುಮಾರ್ ರೈ ತಿಂಗಳಾಡಿಗುತ್ತಿನ ಸೀತಾರಾಮ ಪೂಜಾರಿ ತಿಂಗಳಾಡಿ, ಸಂಜೀವ ಪೂಜಾರಿ ತಿಂಗಳಾಡಿ, ಕೇಶವ ಪೂಜಾರಿ ತಿಂಗಳಾಡಿ, ಗುತ್ತಿಗೆದಾರ ಮುರಳೀಧರ್, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಸಾಂತಪ್ಪ ಪೂಜಾರಿ ಹಟ್ಟದಡ್ಕ, ಪುರುಷೋತ್ತಮ ಪೂಜಾರಿ ಮಜಲು, ದಯಾನಂದ ಸುಳ್ಯ, ಬಜರಂಗ ದಳದ ಪ್ರಮುಖರಾದ ಗುರುಪ್ರಸಾದ್ ಬಂಟ್ವಾಳ, ಸಂತೋಷ್ ನೇಲ್ಯಪಲ್ಕೆ, ಬೆಂಗಳೂರಿನ ಉದ್ಯಮಿ ಕೆ.ಟಿ.ಪೂಜಾರಿ, ನಾರಾಯಣ ಪೂಜಾರಿ ತಿಂಗಳಾಡಿ, ವಸಂತ ಪೂಜಾರಿ ಡೆಚ್ಚಾರ್, ನಟರಾಜ್ ಕುಟ್ಟಿಕಳ, ಪ್ರಕಾಶ್ ಅಂಚನ್, ದಯಾನಂದ ಮುಂಡ್ರೇಲ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಸರಪಾಡಿ ಸ್ವಾಗತಿಸಿ, ವಂದಿಸಿದರು