ಬಂಟ್ವಾಳ: ಭಾರತೀಯ ಜನತಾ ಪಕ್ಷ ಯಾವುದೇ ರಾಜಕೀಯ ಪಾರ್ಟಿಯನ್ನು ಎ ಟೀಮ್ ಅಥವಾ ಬಿ ಟೀಮ್ ಆಗಿಇಟ್ಟುಕೊಂಡಿಲ್ಲ,ನಮ್ಮದೇನಿದ್ದರೂ, ಜನರೊಂದಿಗೆ ಬೆಳೆದು ಬಂದ ಪಕ್ಷ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಬಂಟ್ವಾಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚುನಾವಣೆ ಮತ್ತು ಮತದಾನದ ಸಂದರ್ಭ ಒಲವು ಬದಲಾವಣೆಗಳಾಗುತ್ತದೆ, ರಾಮಾಯಣ ಕಾಲದಲ್ಲಿಯೂ ವಿಭೀಷಣನ ಪರ ಒಲವು ತೋರಿಸಿದ್ದ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದ ಅವರು, ಬಿಜೆಪಿ ಗೆಲ್ಲಬೇಕುಬೆನ್ನುವ ಮನಸ್ಸಿನವರು ಕಾಂಗ್ರೇಸ್ ನಲ್ಲಿಯೂ ಇದ್ದಾರೆ, ಜೆಡಿಎಸ್ ನಲ್ಲಿಯೂ ಇದ್ದಾರೆ ಎಂದರು. ಪಕ್ಷಾಂತರ ಪರ್ವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದು ಸಹಜ, ಇಲ್ಲಿ ಕೂಡೋಲೆಕ್ಕಕ್ಕೆ ಯಶಸ್ಸು ಇದೆಯೇ ವಿನಃ ಕಳೆಯುವುದಕ್ಕಲ್ಲ ಎಂದರು. ಪಠ್ಯ ಪುಸ್ತಕ ವಿವಾದ ಕುರಿತ ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯ ಪುಸ್ತಕ ಸರಿಇಲ್ಲ ಎನ್ನುವವರು, ಪಠ್ಯ ಪುಸ್ತಕವನ್ನು ಓದಿ, ಬಳಿಕ ಮಾತನಾಡಲಿ, ಯಾರ್ಯಾರದೋ ಮಾತು ಕೇಳಿ ಮಾತನಾಡಬಾರದು ಎಂದರು.