Thursday, April 18, 2024

ಬಡ ಕುಟುಂಬಕ್ಕೆ ಸೂರು ನೀಡಿ ಮಾನವೀಯತೆ ಮೆರೆದ ಶಾರದೋತ್ಸವ ಸಮಿತಿ

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದು, ಸ್ವಂತ ಸೂರಿಲ್ಲದೆ ತಾಲೂಕಿನ ಕೊಯಿಲಾ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವೇದಾವತಿ ಅವರ ಬಡಕುಟುಂಬಕ್ಕೆ ಸಿದ್ದಕಟ್ಟೆ ಶಾರದೋತ್ಸವ ಸಮಿತಿ ಮುಂದಾಳತ್ವದಲ್ಲಿ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್, ಗುರುಗಣೇಶ್ ಭಜನಾ ಮಂಡಳಿ, ಕರಿಮಲೆ ಚರ್ಚ್ ಪಾಲನ ಮಂಡಳಿ ಸೇರಿದಂತೆ ಸರ್ವಧರ್ಮಿಯ  ದಾನಿಗಳ ಆರ್ಥಿಕ ಸಹಕಾರದೊಂದಿಗೆ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದು ಭಾನುವಾರ ಬಡಕಟುಂಬಕ್ಕೆ ಹಸ್ತಾಂತರಿಸಲಾಯಿತು. ಹಲವು ವರ್ಷಗಳಿಂದ ಸ್ವಂತ ಮನೆಗಾಗಿ ಪರಿತಪಿಸುತ್ತಿದ್ದ ವೇದಾವತಿ ಅವರ ಕುಟುಂಬದ ಮೊಗದಲ್ಲಿ ಸಂಭ್ರಮ ಮನೆಮಾಡಿತ್ತು.

ವೇದಾವತಿ ಅವರಿಗೆ ಮಗಳ ಹೆರಿಗೆಯ ಬಳಿಕ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡು ಸೊಂಟದ ಬಲ ಕಳೆದುಕೊಂಡರು. ಕೈ ಬೆರಳುಗಳುಗಳು ಮೊಂಡುಗಟ್ಟಿದ್ದ ಪರಿಣಾಮ ಹೆಚ್ಚಿನ ಸಮಯವನ್ನು ಮಲಗಿದ್ದಲ್ಲಿಯೇ ಕಳೆಯಬೇಕಾಯಿತು. ಮನೆಗೆಲಸ , ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಆಶ್ರಯಿಸಿಬೇಕಾದ ಅನಿವಾರ್ಯತೆ ಒದಗಿಬಂತು. ಜೀವನ ನಿರ್ವಹಣೆಗಾಗಿ ಅವಲಂಬಿಸಿದ್ದ ಬೀಡಿಕೆಲಸವನ್ನು ನಿರ್ವಹಿಸಲು ಅಸಾಧ್ಯವಾಗಿತ್ತು. ಕೊಯಿಲ ಬಸ್ಸು ನಿಲ್ದಾಣದ ಬಳಿಯ ಬಾಡಿಗೆ ಮನೆಯಲ್ಲಿ ಅನಾರೋಗ್ಯ ಪೀಡಿತ ತಾಯಿ ಸೇಸಮ್ಮ ಹಾಗೂ ಬುದ್ದಿಮಾಂಧ್ಯ ಮಗಳು ಪೂರ್ಣಿಮಾಳನ್ನು ಸಾಕುವ ಅನಿವಾರ್ಯತೆಯೂ ಅವರಿಗಿತ್ತು. ಬಡತನದ ಮಧ್ಯೆ ಮನೆಯ ಖರ್ಚು ನಿಭಾಯಿಸುವುದರ ಜೊತೆಗೆ ಔಷಧೋಪಚಾರಕ್ಕೆ ಹಣ ಹೊಂದಿಸುವ ಸವಾಲು ಈ ಬಡಕುಟುಂಬಕ್ಕಿತ್ತು. ಸಿದ್ದಕಟ್ಟೆ ಶಾರಾದೋತ್ಸವ ಸಮಿತಿ ಬಡಕುಟುಂಬಕ್ಕೆ ಮನೆ ನಿರ್ಮಿಸಿ ಮಾನವೀಯತೆ ಮೆರೆದಿದೆ.

ಮನೆಹಸ್ತಾಂತರ ಕಾರ್ಯಕ್ರಮ: ಕೊಯಿಲಾ ಗ್ರಾಮದಲ್ಲಿ ಜಾಗ ಗುರುತಿಸಿ, ಹೊಸ ಮನೆ ನಿರ್ಮಿಸಿ ವಿದ್ಯುತ್, ನೀರಿನ ವ್ಯವಸ್ಥೆ ಸಹಿತ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಭಾನುವಾರ ಪುರೋಹಿತರಾದ ಗಣೇಶ್ ಮೂಡುಕೋಡಿ ಅವರು ಗಣಹೋಮ ಸಹಿತ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿಕೊಟ್ಟರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದರು. ಅವರು ಶುಭಕೋರಿ ಮಾತನಾಡಿ ದಾನಿಗಳ ಸಹಕಾರದೊಂದಿಗೆ ಸಿದ್ದಕಟ್ಟೆ ಶಾರದೋತ್ಸವ ಸಮಿತಿ ನೇತೃತ್ವದಲ್ಲಿ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ. ತನ್ನ ಸಹಕಾರವನ್ನು ಮನೆ ನಿರ್ಮಾಣದ ಕಾರ್ಯಕ್ಕೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭ ಮನೆ ನಿಮಾಣದ ರುವಾರಿ ಜಗದೀಶ್ ಕೊಯಿಲಾ, ಸಿದ್ದಕಟ್ಟೆ ಶಾರದೋತ್ಸವ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಪ್ರಮುಖರಾದ ಬೇಬಿ ಕುಂದರ್, ದೇವಪ್ಪ ಕರ್ಕೆರಾ, ರಾಘವೇಂದ್ರ ಭಟ್, ಶಾಂಭವಿ,ಅಬ್ದುಲ್ ಖಾದರ್, ಸದಾನಂದ ಶೀತಲ್, ನೋಣಯ್ಯ, ಡೆನ್ನಿಸ್ ಪಿಂಟೊ, ದಿನೇಶ್ ಶೆಟ್ಟಿಗಾರ್, ನವೀನ್  ಮಂಜಿಲ, ದೇವರಾಜ್ ಸಾಲ್ಯಾನ್, ರಾಮಸುಂದರ ಗೌಡ ಪಂಚಾಯತಿ ಸದಸ್ಯೆ ಶೋಭಾ ನೋಣಯ್ಯ ಸಪಲ್ಯ, ಅಬ್ದುಲ್ ಖಾದರ್ ಕೊಯಿಲ ಮೊದಲಾದವರು ಉಪಸ್ಥಿತರಿದ್ದರು.

More from the blog

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: 21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...

ಜಿಲ್ಲೆಯಲ್ಲಿ ಜೆ.ಡಿ.ಎಸ್.ಪಕ್ಷ ನಿಷ್ಕ್ರಿಯವಾಗಲು ಕಾರಣರಾದ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡರು ರಾಜೀನಾಮೆ ನೀಡುವಂತೆ ಒತ್ತಾಯ

ಜೆ.ಡಿ.ಎಸ್.ಪಕ್ಷ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಲು ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡ ಅವರೇ ಕಾರಣರಾಗಿದ್ದು, ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಬುಬಕ್ಕರ್ ಅಮ್ಮಂಜೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಧ್ಯಕ್ಷ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...