ಸಂಸ್ಕಾರ ಸಂಘಟನೆ ಸೇವೆ SPYSS(R),ಕರ್ನಾಟಕ, ನೇತ್ರಾವತಿ ವಲಯ, ಸಮಾಜ ಸೇವಾ ಸಹಕಾರಿ ಸಂಘ.ನಿ. ಬಂಟ್ವಾಳ ಇವರ ವತಿಯಿಂದ ಡಾ! ಅಮ್ಮೆಂಬಳ ಬಾಳಪ್ಪ ಅವರ 100 ನೇ ಜನ್ಮ ಶತಾಬ್ದಿ ಪ್ರಯುಕ್ತ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ
ಸಮಾಜ ಸೇವಾ ಸಹಕಾರಿ ಸಂಘದ
ಡಾ.ಬಾಳಪ್ಪ ವೇದಿಕೆ
*ಪ್ರಧಾನ ಕಚೇರಿ,ಬ್ಯೆಪಾಸು ರಸ್ತೆ, ಬಂಟ್ವಾಳ ಇಲ್ಲಿ
*ಮೇ 07, ಶನಿವಾರ ಬೆಳಿಗ್ಗೆ 6:00 ಘಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

 

*SPYSS* ಯೋಗಸಮಿತಿಯು ಸಂಸ್ಕಾರ-ಸಂಘಟನೆ-ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಕಳೆದ 42ವರ್ಷಗಳಿಂದ ನುರಿತ ಯೋಗ ಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿದ ರಾಜ್ಯ,ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ *ಯೋಗದ ಮೂಲಕ ಸಂಸ್ಕಾರಯುತ,ಆರೋಗ್ಯಪೂರ್ಣ ಜೀವನಶ್ಯೆಲಿ ಕಲಿಸುತ್ತಾ ಇದೆ*
ಮಂಗಳೂರಿನಲ್ಲಿ183 ಶಾಖೆ,ಪುತ್ತೂರಿನಲ್ಲಿ ಎರಡು ಶಾಖೆ ಬಿ.ಸಿ.ರೋಡ್, ಸುಬ್ರಮಣ್ಯ,ಪಂಜ,ವಾಮದಪದವು,ಕಲ್ಲಡ್ಕ ಹಾಗೂ ಉಪ್ಪಿನಂಗಡಿಯಲ್ಲಿ ತಲಾ ಒಂದು ಶಾಖೆಗಳಲ್ಲಿ ನಿತ್ಯತರಗತಿ ನಡೆಯುತ್ತಿದೆ. SPYSS ಸಮಿತಿಯು ಯೋಗಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ,ಆದರ್ಶಕುಟುಂಬದ ತರಬೇತಿಯನ್ನು ಕಳೆದ ಒಂದು ವರ್ಷದಿಂದ ನೀಡುತ್ತಾ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here