


ವಿಟ್ಲ: ವಿದ್ಯಾರ್ಥಿಗಳ ಸಾಧನೆ ಶಾಲೆ, ಶಿಕ್ಷಕರು ಹಾಗೂ ಹೆತ್ತವರಿಗೆ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಅಂಕಗಳ ಸಾಧನೆ ಅವಶ್ಯಕತೆಯಿದೆ. ಆಡಳಿತ ಮಂಡಳಿ ಶಿಕ್ಷಕರಿಂದ ಪ್ರತಿ ಹಂತಗಳಲ್ಲಿಯೂ ಮಾಹಿತಿಯನ್ನು ಪಡೆದುಕೊಂಡು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದೆ. ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿಯನ್ನು ನೀಡಿರುವುದರಿಂದ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಲ್. ಎನ್. ಕೂಡೂರು ಹೇಳಿದರು.
ಅವರು ವಿಟ್ಲ ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ 620 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಧನ್ಯಶ್ರೀ, 620 ಕ್ಕಿಂತ ಅಧಿಕ ಅಂಕ ಪಡೆದ ಅನನ್ಯ ಸರಸ್ವತಿ ಬಿ.ಎಂ., ಮೇಧಾ ನಾಯಕ್, ಅರ್ಚನಾ ಎನ್. ಕೆ., ಚರಿಷ್ಮಾ ಆರ್. ರೈ, ಹರ್ಷ ಎಸ್., ಅಪೂರ್ವ ಭಟ್ ಡಿ., ಸ್ಪರ್ಷ ಪ್ರವೀಣ್ ರೈ, ಅವರನ್ನು ಹಾಗೂ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತ ಇಶಾನ್ ಕಾರ್ಯಪ್ಪ ಸೇರಾಜೆ ಅವರನ್ನು ಸನ್ಮಾನಿಸಲಾಯಿತು.
ಸಾಧನೆಗೈದ ವಿದ್ಯಾರ್ಥಿಗಳಾದ ಧನ್ಯಶ್ರೀ, ಮೇಧಾ ನಾಯಕ್, ಹರ್ಷ ಎಸ್. , ಚರಿಷ್ಮಾ ಆರ್. ರೈ, ಕೈಝನ್ ಎಸ್. ಅಭಿಪ್ರಾಯ ಹಂಚಿಕೊಂಡರು. ಪೋಷಕರಾದ ಸೂರ್ಯನಾರಾಯಣ ಎನ್. ಕೆ., ಮಮತಾ, ಜಯಶ್ರೀ, ಶಶಿಧರ ಭಂಡಾರಿ, ಪ್ರಕಾಶ್ ನಾಯಕ್ ಮಾತನಾಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಮೋಹನ ಎ., ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ವಿಟ್ಲ, ನಿರ್ದೇಶಕರಾದ ಹಸನ್ ವಿಟ್ಲ, ಮೋನಪ್ಪ ಶೆಟ್ಟಿ, ವಿಜಯಾ ಪಾಯಸ್, ಆಡಳಿತಾಧಿಕಾರಿ ರಾಧಾಕೃಷ್ಣ ಎ., ಹಿರಿಯ ಶಿಕ್ಷಕ ಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಪ್ರಿನ್ಸಿಪಾಲ್ ಜಯರಾಮ ರೈ ಡಿ. ಸ್ವಾಗತಿಸಿದರು. ವೈಸ್ ಪ್ರಿನ್ಸಿಪಾಲ್ ಹೇಮಾ ವಂದಿಸಿದರು. ಸಹ ಶಿಕ್ಷಕಿ ಎಮಿಲ್ಡಾ ಸೀಮಾ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ಇದೆ:
ವಿಐಎಲ್_20 ಮೇ_1 :


