


ವಿಟ್ಲ: ಮರಕ್ಕಿಣಿ ನಿವಾಸಿ ಕೆ. ಬಿ. ಕೃಷ್ಣ ಭಟ್ (84) ಸ್ವಗೃಹದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಮೂರು ಪುತ್ರರನ್ನು ಅಗಲಿದ್ದಾರೆ. ದೇಹವನ್ನು ಮಂಗಳೂರಿನ ಕೆ. ಎಂ. ಸಿ. ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದ ಅವರು ಕೇಪು ಪಂಚಾಯಿತಿಯ ಸದಸ್ಯರಾಗಿದ್ದರು. ಅಡ್ಯನಡ್ಕ ಎಜ್ಯುಕೇಶನಲ್ ಸೊಸೈಟಿಯ ಸದಸ್ಯರಾಗಿ, ಕೇಪು ಗ್ರಾಮದ ಗುರಿಕ್ಕಾರರಾಗಿದ್ದರು.


