Thursday, October 19, 2023

ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಗೋಶಾಲೆಯ ಉದ್ಘಾಟನೆ, ನೂತನ ರಥ ಸಮರ್ಪಣೆ

Must read

ಬಂಟ್ವಾಳ :  ಬಂಟ್ವಾಳ ತಾ.ಉಳಿ ಗ್ರಾಮದ ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ   ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಗೋಶಾಲೆಯ ಉದ್ಘಾಟನೆ ಮತ್ತು ನೂತನ ರಥ ಸಮರ್ಪಣೆ  ಕಾರ್ಯಕ್ರಮ ಗುರುವಾರ ನಡೆಯಿತು.
ನವೀಕೃತ ರಾಜಗೋಪುರ,ಮಹಾದ್ವಾರ, ಭೋಜನ ಶಾಲೆ, ಗೋಶಾಲೆಯನ್ನು ಉಡುಪಿ ಪುತ್ತಿಗೆ ಮಠಾಽಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಮತ್ತು ಶ್ರೀ ಸುಬ್ರಹ್ಮಣ್ಯ ಮಠಾಽಶ ಶ್ರೀ ವಿದ್ಯಾಪ್ರಸನ್ನ  ತೀರ್ಥ ಶ್ರೀ ಪಾದಂಗಳವರು ಲೋಕಾರ್ಪಣೆಗೊಳಿಸಿದರು. ಬಳಿಕ ನೂತನ ರಥದ ಸಮರ್ಪಣೆ ನಡೆಯಿತು.
ಬೆಳಗ್ಗೆ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಮೂಲಕ ಸ್ವಾಗತಿಸಿ, ಪಾದ ಪೂಜೆ ನಡೆಸಿ ಗೌರವಿಸಲಾಯಿತು. ಬಳಿಕ ಗೋಶಾಲೆಯಿಂದ ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶತವಧಾನಿ ವಿದ್ವಾನ್ ರಾಮನಾಥ ಆಚಾರ್ಯ ಉಡುಪಿ ಅವರ ಗ್ರಹ ಸಮೀಕ್ಷಾ ಮತ್ತು ಯೋಗೀಂದ್ರ ಭಟ್ ಅವರ ಭರವಸೆಯ ಬೆಳಕು ಪುಸ್ತಕ ಬಿಡುಗಡೆ ನಡೆಯಿತು. ಕ್ಷೇತ್ರದ ಕಾಮಗಾರಿ ನಿರ್ವಹಿಸಿದವರನ್ನು ಸಮ್ಮಾನಿಸಲಾಯಿತು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸುದರ್ಶನ ಹೋಮ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.
ಕ್ಷೇತ್ರದ ಆನುವಂಶಿಕ ಪ್ರ.ಅರ್ಚಕ ಮುನ್ನೂರಾಯ ಯೋಗೀಂದ್ರ ಭಟ್ ಉಳಿ, ಮಾಜಿ ಸಚಿವ, ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ, ಆನುವಂಶಿಕ ಮೊಕ್ತೇಸರೆ ಶ್ಯಾಮಲಾ ಪುರುಷೋತ್ತಮ ಭಟ್, ಪ್ರ.ಅರ್ಚಕ ಕಿಶೋರ್ ಭಟ್, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ, ಸಮಿತಿ ಸಂಚಾಲಕಿ ದಿವ್ಯಾ ಯೋಗೀಂದ್ರ ಭಟ್, ಉಪಾಧ್ಯಕ್ಷರಾದ ಶ್ರೀಪತಿ ಭಟ್, ದಾಮೋದರ ನಾಯಕ್, ಕಾರ್ಯಾಧ್ಯಕ್ಷ ವಿಟ್ಠಲರಾಜ್ ಗೌಡ, ಪದಾಽಕಾರಿಗಳಾದ ವಿಟ್ಠಲದಾಸ್ ಭಟ್, ಯಜ್ಞೇಶ್, ದಿವಾಕರ ರಾವ್, ಪ್ರೇಮನಾಥ, ಸಂಜೀವ ಗೌಡ, ಗುರುಪ್ರಕಾಶ್, ಜಿನ್ನಪ್ಪ ಗೌಡ, ಪುರುಷೋತ್ತಮ ಗೌಡ, ಜಾರಪ್ಪ ಪೂಜಾರಿ, ತಿಲಕ್ ಪೂಜಾರಿ, ಗಿರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.

More articles

Latest article