


ರಾಷ್ಟ್ರೀಯ ಹೆದ್ದಾರಿ 75 ರ ಸೂರಿಕುಮೇರು ಮಸೀದಿ ಸಮೀಪ ವಾಹನವೊಂದು ಅಪಘಾತಕ್ಕೀಡಾಗಿತ್ತು.ಅಪಘಾತದಲ್ಲಿ ಗಾಯಗೊಂಡು ವ್ಯಕ್ತಿಯೋರ್ವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇದೇ ದಾರಿಯಲ್ಲಿ ಸಾಗುತ್ತಿದ್ದ ಬಂಟ್ವಾಳ ಠಾಣೆಯ ಪೋಲಿಸ್ ಉದಯ್ ಎಂಬವರು ಕೂಡಲೇ ತನ್ನ ಸ್ವಿಫ್ಟ್ ಕಾರಿನಲ್ಲಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ತಾನು ಧರಿಸಿದ ಪೋಲಿಸ್ ಸಮವಸ್ತ್ರ ಮತ್ತು ತನ್ನ ಕಾರು ಸಂಪೂರ್ಣ ರಕ್ತದಿಂದ ತೋಯ್ದು ಹೋಗಿದ್ದರೂ ಯಾವುದನ್ನು ಲೆಕ್ಕಿಸದೆ ಗಾಯಾಳುವಿನ ಜೀವ ಉಳಿಸಲು ಪ್ರಯತ್ನಿಸಿದ ಉದಯ್ ರವರ ಕರ್ತವ್ಯ ನಿಷ್ಟೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.


