ಬಂಟ್ವಾಳ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕುಂದುಕೊರತೆ ಸಭೆ ತಹಶೀಲ್ದಾರ್ ಸ್ಮಿತಾರಾಮು ಅವರ ಅಧ್ಯಕ್ಷತೆಯಲ್ಲಿ ಮೇ.26 ರಂದು ಗುರುವಾರ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ
ನಡೆಯಿತು.
ತಾಲೂಕು ಮಟ್ಟದ ಸಭೆಗೆ ಹಾಜರಾಗಬೇಕಾದರೆ ಸರಿಯಾದ ಮಾಹಿತಿ ಜೊತೆಗೆ ತಾಲೂಕು ಮಟ್ಟದ ಅಧಿಕಾರಿಗಳೇ ಹಾಜರಾಗಿ ಎಂದು ತಹಶೀಲ್ದಾರ್ ಸ್ಮಿತಾರಾಮು ಖಡಕ್ ವಾರ್ನಿಂಗ್ ನೀಡಿದ ಘಟನೆ ಸಭೆಯಲ್ಲಿ ನಡೆಯಿತು.
ಸಭೆಗೆ ಹೋಬಳಿ ಮಟ್ಟದ ಅಧಿಕಾರಿಗಳು ಹಾಜರಾಗಿ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಇಲ್ಲದೆ ಪರದಾಡುತ್ತಿರುವ ವೇಳೆ ಅವರು ಈ ಮಾತನ್ನು ಹೇಳಿದರು.
1 ರಿಂದ 12 ನೇ ತರಗತಿ ವರೆಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಒತ್ತಾಯ ಪೂರ್ವಕವಾಗಿ ಶಾಲಾ ಶುಲ್ಕ ಪಡೆಯುವಂತಿಲ್ಲ ಎಂಬ ಸರಕಾರದ ಸುತ್ತೊಲೆಯಿದ್ದರು, ಕೆಲವು ಶಾಲೆಗಳಲ್ಲಿ ಶುಲ್ಕ ಕ್ಕಾಗಿ ಒತ್ತಾಯ ಮಾಡಲಾಗುತ್ತಿದೆ,ಇದರ ಬಗ್ಗೆ ಕ್ರಮ ಕೈಗೊಳ್ಳಲು ವಿಶ್ವನಾಥ ಚೆಂಡ್ತಿಮಾರ್ ಒತ್ತಾಯಿಸಿದರು.
ಪಂಜಿಕಲ್ಲು ಶಾಲೆಯಲ್ಲಿ ಮಗುವಿಗೆ ಶಿಕ್ಷಕಿ ಹೊಡೆದ ಪ್ರಕರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಗಂಗಾಧರ ಅವರು ಪ್ರಶ್ನಿಸಿದರು.
ಅಂತಹ ಯಾವುದೇ ಪ್ರಕರಣ ಗಮನಕ್ಕೆ ಬಂದಿಲ್ಲ, ಬಂದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.
ಪಂಜಿಕಲ್ಲು ಗ್ರಾಮದಲ್ಲಿ ಲೈಸೆನ್ಸ್ ಪಡೆಯದೆ ಶೇಂದಿ ಕಾರ್ಯ ಚರಣೆ ಮಾಡುತ್ತಿದ್ದು, ಶೇಂದಿ ಜೊತೆಗೆ ಅಕ್ರಮ ಸಾರಾಯಿ ಮಾರಟ ಮಾಡುತ್ತಿದ್ದು, ಕೂಡಲೇ ಅದನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
ಅರಳ ಮತ್ತು ಕಡೇಶಿವಾಲಯ ಗ್ರಾಮದಲ್ಲಿ ಗೂಡಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು, ಅದು ಇಲಾಖೆಯ ಸಹಕಾರದಿಂದಲೇ ನಡೆಯುತ್ತಿದೆ ಎಂಬ ಮಾಹಿತಿ ಇದೆ, ಇದರ ಬಗ್ಗೆ ಅಧಿಕಾರಿಗಳು ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿದೆ ಸತೀಶ್ ಅರಳ ಒತ್ತಾಯ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಶಿಕ್ಷಣ ಆಶ್ರಮ ಶಾಲೆ ಕಟ್ಟಡ ಹಳೆಯದಾಗಿದ್ದು,
ಬೀಳುವ ಸ್ಥಿತಿಯಲ್ಲಿದೆ, ಹಾಗಾಗಿ ಅದರ ಅಭಿವೃದ್ಧಿ ಪಡಿಸುವ ಕುರಿತಾಗಿ ಶಾಸಕರ ಮೂಲಕ ಸರಕಾರಕ್ಕೆ ಅಂದಾಜು ಪಟ್ಟಿ ಕಳುಹಿಸಿ ಬೇಕಾಗಿ ಜನಾರ್ದನ ಚೆಂಡ್ತಿಮಾರ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಮನೆ ಸಹಿತ ಇತರ ಕೆಲಸಗಳಿಗೆ ಅವಶ್ಯಕ ವಾಗಿ ಜಮೀನಿನ
ಭೂಪರಿವರ್ತನೆ ಸಮಸ್ಯೆ ಬಹಳ ಕಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಪ್ರಸ್ತಾವನೆ ಕಳುಹಿಸಲಾಗುವುದು ಆದರೆ ಸರಕಾರದ ಹಂತದಲ್ಲಿ ನಡೆಯಬೇಕಾಗಿದೆ ಎಂದು ತಹಶೀಲ್ದಾರ್ ಸ್ಮಿತಾರಾಮು ತಿಳಿಸಿದರು.
ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಗೆ ಒಳಪಟ್ಟ ಸರ್ವೇ ಇಲಾಖೆಯಲ್ಲಿ ಇರುವಷ್ಟು ಸಮಸ್ಯೆ ಬೇರೆ ಯಾವುದೇ ಇಲಾಖೆಯಲ್ಲಿ ಇಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
ಎಸ್.ಎಸ್.ಟಿ.ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳೇ ಹಾಜರಾಗಬೇಕು ಎಂಬ ಒತ್ತಾಯಗಳು ಕೇಳಿ ಬಂತು. ಸರಿಯಾದ ಮಾಹಿತಿ ಇಲ್ಕದೆ ಹೋಬಳಿ ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಸಭೆಯಲ್ಲಿ ತಿಳಿಸಿದರು.
*ಸಾವಿರ ಜ್ವಲಂತ ಸಮಸ್ಯೆಗಳು ಇವೆ, ಈ ವರಗೆ ಯಾವುದೇ ರೀತಿಯ ಪರಿಹಾರ ಆಗಿಲ್ಲ, ಕಳೆದ ಅನೇಕ ವರ್ಷಗಳಿಂದ ಸಭೆಗೆ ಪೇಪರ್ ಗಳ ಪಟ್ಟಿ ಹಿಡಿದುಕೊಂಡು ಸಭೆಗೆ ಹಾಜರಾಗಿ ಅಧಿಕಾರಿಗಳಲ್ಲಿ ಕಾಡಿದ್ದು, ಬೇಡಿದ್ದು ಬಿಟ್ಟರೆ ಯಾವ ಪ್ರಯೋಜನ ವೂ ನಮ್ಮ ಸಮುದಾಯಕ್ಕೆ ಆಗಿಲ್ಲ….ಇಷ್ಟು ವರ್ಷಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಾಗಿದ್ದು ಬಿಟ್ಟರೆ ನಮಗೆ ಏನು ನೀಡಿದ್ದಾರೆ ಅಧಿಕಾರಗಳೇ ಉತ್ತರಿಸಿ, ಎಂದು ಜನಾರ್ಧನ ಚೆಂಡ್ತಿಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.*
ಸರಕಾರಿ ಆಸ್ಪತ್ರೆ ಯ ಎದುರು ಅಡ್ಡವಾಗಿ ರಿಕ್ಷಾ ಸಹಿತ ಇತರ ವಾಹನಗಳನ್ನು ನಿಲ್ಲಿಸುವುದರಿಂದ ಆಸ್ಪತ್ರೆಗೆ ತುರ್ತು ವಾಹನಗಳು ಬರಲು ತೊಂದರೆಯಾಗುತ್ತಿದ್ದು, ಟ್ರಾಫಿಕ್ ಪೋಲಿಸರು ಅಂತಹ ವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ವಿಶ್ವನಾಥ ಚೆಂಡ್ತಿಮಾರ್ ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಕೆಲವು ಗ್ರಾಮೀಣ ಭಾಗದ ಸರಕಾರಿ ಬಸ್ ಗಳ ಓಡಾಟ ಕ್ಕೆ ಬ್ರೇಕ್ ಬಿದ್ದಿದೆ. ಅಬಳಿಕದ ದಿನಗಳಲ್ಲಿ ಬಸ್ ಗಳ ಓಡಾಟ ನಡೆಸದೇ ಇರುವುದು ಸಾಮಾನ್ಯ ಜನರಿಗೆ ತೊಂದರೆಯಾಗಿದ್ದು, ಕೂಡಲೇ ಅಂತಹ ಗ್ರಾಮೀಣ ಭಾಗಕ್ಕೆ ಬಸ್ ಗಳ ಓಡಾಟ ನಡೆಸುವಂತೆ ಗಂಗಾಧರ ಅವರು ಒತ್ತಾಯಿಸಿದರು.
ಕಳೆದ ಕೆಲವು ಸಮಯದಿಂದ ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿ ವ್ಯಾಪ್ತಿಗೆ ಸೇರಿದ ಠಾಣೆಗಳಲ್ಲಿ ಎಸ್. ಟಿ.ಎಸ್.ಸಿ.ಸಭೆ ನಡೆದಿಲ್ಲ.
ಹೆದ್ದಾರಿ ಬದಿಯಲ್ಲಿ ಪೋಲೀಸ್ ಇಲಾಖೆಯ 112 ವಾಹನಗಳು ನಿಲ್ಲಿಸಲಾಗುತ್ತಿದ್ದು, ಇದರ ಉದ್ದೇಶ ಏನು? ಅವರು ಮರಳು ಸಹಿತ ಇತರರ ಕೈಯಿಂದ ಹಣ ವಸೂಲಿ ಮಾಡುವುದಕ್ಕಾ? ಎಂಬ ಪ್ರಶ್ನೆಯನ್ನು ಪೋಲೀಸ್ ಇಲಾಖೆಗೆ ಜನಾರ್ದನ ಚೆಂಡ್ತಿಮಾರ್ ಕೇಳಿದ್ದಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ವಸೂಲು ಮಾಡುವ ಪ್ರಕರಣಗಳು ನಡೆದ ರೆ ಅದಕ್ಕೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಉಪಸ್ಥಿತರಿದ್ದರು.