ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಆದೇಶ ಅನ್ವಯ ಕೇಂದ್ರ ಸರಕಾರ ಕಿಸಾನ್ ಭಾಗಿಧಾರಿ ಪ್ರಾಥಮಿಕ ಹಮಾರಿ ಅಭಿಯಾನ ಮೂಲಕ ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸೌಲಭ್ಯ ಪಡೆಯುವ ಫಲಾನುಭವಿಗೆಲ್ಲರಿಗೂ ಹೊಸ ಸದಸ್ಯರನ್ನಾಗಿ ಗುರುತಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ನೀಡಲು ಕೇಂದ್ರ ಸರಕಾರ ಅವಕಾಶ ಮಾಡಿ ಕೊಟ್ಟಿದೆ..
ಒಬ್ಬ ವ್ಯಕ್ತಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಫಲಾನುಭವಿ ಯಾಗಿದ್ದು ಕನಿಷ್ಠ 0.15 ಎಕ್ರೆ ಹಾಗೂ ಮೇಲ್ಪಟ್ಟು ಕೃಷಿ ಜಮೀನು ಹೊಂದಿದ್ದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಹಕಾರ ಸಂಘಗಳಲ್ಲಿ ಮಿತಿಗೊಳಪಟ್ಟು ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹಾಗೂ ರಾಷ್ಟ್ರೀಕ್ರತ ಬ್ಯಾಂಕ್ ಗಳಲ್ಲಿ ಶೇಖಡ 4% ಬಡ್ಡಿ ದರದಲ್ಲಿ ಸಾಲ ತೆಗೆಯಲು ಕೇಂದ್ರಸರಕಾರ ಸಮ್ಮತಿ ನೀಡಿದೆ.
ಈ ಸಂಬಂಧ ರೈತರು ತಮ್ಮ ಭಾವ ಚಿತ್ರದೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್.. ಮತ್ತು ಜಮೀನಿನ ಆರ್. ಟಿ. ಸಿ. ಯೊಂದಿಗೆ ತಮ್ಮ ಕಾರ್ಯ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಿಗೆ ಅರ್ಜಿ ನೀಡಿ ಯೋಜನೆ ಸೌಲಭ್ಯ ಪಡೆಯುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆ ಮೂಲಕ ರೈತರಿಗೆ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಪಡೆಯುವ ಎಲ್ಲಾ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಅವಕಾಶ ಮಾಡಿಕೊಟ್ಟ ಪ್ರದಾನ ಮಂತ್ರಿ ನರೇಂದ್ರ ಮೋದಿ ಯಾವರಿಗೆ ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಯವರಿಗೆ ರಾಜ್ಯದ ರೈತರ ಪರವಾಗಿ ಪ್ರಭಾಕರ ಪ್ರಭು ಅಭಿನಂದನೆ ಸಲ್ಲಿಸಸಿದ್ದಾರೆ.