


ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ರಾಮನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಶಾರದಾ ರಾಮ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಕಾರ್ಯಗಳನ್ನು ಮಾಡುವ ವೇಳೆ ಹಿಂದೂ ಸಮಾಜ ಸಂಘರ್ಷಗಳನ್ನು ದೂರವಿಟ್ಟು ಎಲ್ಲರೂ ಒಂದಾಗಿ ಪ್ರೀತಿಯಿಂದ ಆ ಕಾರ್ಯದಲ್ಲಿ ತೊಡಗಿದಾಗ ಯಶಸ್ಸು ದೊರೆಯಲು ಸಾಧ್ಯವಿದ್ದು, ಈ ಕ್ಷೇತ್ರದಲ್ಲಿ ೯ ತಿಂಗಳೊಳಗೆ ಸುಂದರ ಮಂದಿರ ನಿರ್ಮಾಣಗೊಳ್ಳಲಿದೆ. ಮಂದಿರ ಹೆಸರಿನ ಕುರಿತು ಗೊಂದಲವಿಲ್ಲದೆ ಸೂಕ್ತ ತೀರ್ಮಾನ ತೆಗೆದುಕೊಂಡು ಮುಂದುವರಿಯಲು ಶ್ರೀಗಳು ಮಾರ್ಗದರ್ಶನ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಯಾವುದೇ ಕಾರ್ಯ ಈಡೇರುವುದಕ್ಕೆ ಯೋಗ ಅತಿ ಅಗತ್ಯವಾಗಿದ್ದು, ಪ್ರಸ್ತುತ ಈ ಮಂದಿರಕ್ಕೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಇದರ ನಿರ್ಮಾಣದಲ್ಲಿ ಶಾಸಕನಾಗಿ, ವೈಯಕ್ತಿಕವಾಗಿ ತನ್ನ ಸಹಕಾರ ನೀಡುವುದಕ್ಕೆ ಬದ್ಧನಾಗಿದ್ದೇನೆ ಎಂದರು.
ಶ್ರೀ ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಪುರೋಹಿತ ಸಾಯಿ ಶಾಂತಿ ಕೋಕಲ, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಸಾಂತಪ್ಪ ಪೂಜಾರಿ ಹಟ್ಟದಡ್ಕ, ದಯಾನಂದ ಸುಳ್ಯ, ಸರೋಜಿನಿ, ಸರಪಾಡಿ ಗ್ರಾ.ಪಂ.ಸದಸ್ಯರಾದ ಧನಂಜಯ ಶೆಟ್ಟಿ ನಾಡಬೆಟ್ಟು, ರಾಮಕೃಷ್ಣ ಮಯ್ಯ, ಮಾಜಿ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಕಡಮಾಜೆ, ವಿವಿಧ ಧಾರ್ಮಿಕ ಕ್ಷೇತ್ರಗಳ ಪ್ರಮುಖರಾದ ಪ್ರಕಾಶ್ ಅಂಚನ್, ಸಂಪತ್ಕುಮಾರ್ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ, ಶಿವರಾಮ ಶೆಟ್ಟಿ ದೋಟ, ರಾಧಾಕೃಷ್ಣ ರೈ ಕೊಟ್ಟುಂಜ, ಸುಂದರ ನಾಯಕ್ ಇಳಿಯೂರು, ರವೀಂದ್ರ ಟಿ.ಸಿ, ಶಶಿಕಾಂತ್ ಶೆಟ್ಟಿ ಆರುಮುಡಿ, ಸುದರ್ಶನ್ ಬಜ, ನಾಗೇಶ್ ಪೂಜಾರಿ ನೈಬೇಲು, ಜಯ ನಾಯ್ಕ ಅಂತರ, ಪ್ರಶಾಂತ್ ನಾಯಕ್, ದೇವದಾಸ್ ನಾಯಕ್, ಸುರೇಶ್ ನಂದೊಟ್ಟು, ಸಂತೋಷ್ ಕುಲಾಲ್, ಅಭಿಷೇಕ್ ಸುವರ್ಣ, ಆನಂದ ಶೆಟ್ಟಿ ಬಾಚಕೆರೆ, ರವಿರಾಜ್ ಶೆಟ್ಟಿ ಕೈಯಾಳ, ಮೋನಪ್ಪ ಪೂಜಾರಿ ಬೈಸೊಂಬು, ಶಶಿಧರ್ ಕೋಕಳ, ಪ್ರದೀಪ್ ರೈ ಮೊದಲಾದರಿದ್ದರು.


