ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮೋಹನ್ ದಾಸ್ ರವರ ಚಿಕಿತ್ಸಾ ವೆಚ್ಚಕ್ಕಾಗಿ ಯುವಶಕ್ತಿ ಸೇವಾಪಥ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನಗೊಂಡಿದೆ.
ಸೇವಾಪಥದ ಪೊಳಲಿ ಸೇವಾಸಿಂಧು ಯೋಜನೆಯಲ್ಲಿ ಓಂಶ್ರೀಸಾಯಿಗಣೇಶ ಸೇವಾಟ್ರಸ್ಟ್ ಮುಖಾಂತರ ಭಾಗವಹಿಸಿದ್ದ ಮೋಹನ್ ದಾಸ್ ರವರಿಗೆ ಕಲ್ಲಡ್ಕ ದಲ್ಲಿ ರಸ್ತೆ ಅಪಘಾತವಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯ ಬಿಲ್ ಲಕ್ಷಾಂತರ ರೂಳಾಗಿದ್ದು ಬಡಕುಟುಂಬಕ್ಕೆ ಸೇವಾಪಥ ಸಾಥ್ ನೀಡಿದೆ
ಸಹೃದಯಿ ದಾನಿಗಳಿಂದ ಮೂರು ದಿನಗಳಲ್ಲಿ 3,19,439(ಮೂರು ಲಕ್ಷ ಹತ್ತೊಂಬತ್ತು ಸಾವಿರದ ನಾಲ್ನೂರ ಮೂವತ್ತೊಂಬತ್ತು ಸಂಗ್ರಹಿಸಿ ನೆನ್ನೆ ಎ.ಜೆ ಆಸ್ಪತ್ರೆಯಲ್ಲಿ ಸೇವಾಪಥದ ಪ್ರಮುಖರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದೆ.
ಇದೀಗ ಮೋಹನ್ ದಾಸ್ ಚೇತರಿಸಿಕೊಳ್ಳುತ್ತ್ತಿದ್ದು, ಇವರ ನೆರವು ಇತರರಿಗೆ ಮಾದರಿಯಾಗಿದೆ.