Wednesday, April 10, 2024

ಸಣ್ಣ ವಿಚಾರಗಳ ಕುರಿತು ಚರ್ಚೆ ಮಾಡದೆ ಧರ್ಮವನ್ನು ಉಳಿಸುವ ಕಾರ್ಯ ಅತಿ ಅಗತ್ಯ: ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ

ಬಂಟ್ವಾಳ: ಸಣ್ಣ ವಿಚಾರಗಳ ಕುರಿತು ಚರ್ಚೆ ಮಾಡದೆ ಧರ್ಮವನ್ನು ಉಳಿಸುವ ಕಾರ್ಯ ಅತಿ ಅಗತ್ಯವಾಗಿದ್ದು, ವೈದಿಕ, ಶ್ರವಣ ಹಾಗೂ ಆದಿ ದ್ರಾವಿಡ ಈ ಮೂರು ಭಾರತೀಯ ಸಂಸ್ಕೃತಿಗಳು ಕೂಡ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಮ್ಮಿಲಿತಗೊಂಡಿರುವುದು ನಮ್ಮ ಹೆಗ್ಗಳಿಕೆಯಾಗಿದೆ ಎಂದು ಮೂಡಬಿದ್ರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.
ಅವರು ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಹೇಶ್‌ಕುಮಾರ್ ಭಟ್ ಕರಿಕ್ಕಳ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಐತಾಳ್ ಲಡ್ಡುಕೋಡಿ, ಸ್ಥಳದಾನಿ ಯಮುನಾ ಅಗರಗಂಡಿ, ವೀಣಾ ಪಿ.ಆಳ್ವ ಬೆಂಗಳೂರು, ಶಿಲ್ಪಿಗಳಾದ ರಾಜೇಶ್ ಆಚಾರ್ಯ ಕಾಸರಗೋಡು, ಕುಮಾರ್ ಆಚಾರ್ಯ, ಜಯಪ್ರಕಾಶ್ ಆಚಾರ್ಯ, ಶ್ರಮದಾನಿಗಳಾದ ವಿಶ್ವನಾಥ ಶೆಟ್ಟಿ ಸುಕ್ರೋಡಿ, ಸಂಜೀವ ಪೂಜಾರಿ ತಿಂಗಳಾಡಿ, ಜಯ ನಾಯ್ಕ ಅಂತರ, ಆನಂದ ಮೇಸ್ತಿç ಅಲ್ಲಂಗಾರು, ಶೇಖರ ನಾಯ್ಕ್ ಹಂಡೀರು, ಶಿವಾನಂದ ಕುಲಾಲ್ ನೇಲ್ಯಪಲ್ಕೆ, ಚೆನ್ನಮ್ಮ ಟೀಚರ್, ಪೂವಪ್ಪ ಪೂಜಾರಿ ಅಗಚರಕೋಡಿ, ಪ್ರಶಾಂತ್ ಪೂಜಾರಿ ನೇಲ್ಯಪಲ್ಕೆ, ಈಶ್ವರ ನಾಯ್ಕ್, ವಸಂತ ಪೂಜಾರಿ ಹಟದಡ್ಕ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿ.ಪ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದಂತ ವೈದ್ಯ ಡಾ| ರಾಜರಾಮ್ ಕೆ.ಬಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಂಟ್ವಾಳ ಪಂಚಾಯತ್‌ರಾಜ್ ಎಂಜಿನಿಯರಿAಗ್ ವಿಭಾಗದ ಕಿರಿಯ ಎಂಜಿನಿಯರ್ ಕೃಷ್ಣ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವಪ್ರಸನ್ನ, ಮಂಗಳೂರು ಯೆನಪೋಯ ಆಸ್ಪತ್ರೆಯ ವೈದ್ಯ ಡಾ| ಗಗನ್‌ದೀಪ್ ಬೆಂಗಳೂರು, ಉದ್ಯಮಿಗಳಾದ ವಸಂತ ಶೆಟ್ಟಿ ಕೇದಗೆ, ರಾಜೇಂದ್ರಕುಮಾರ್ ಕಕ್ಯಪದವು, ಕಕ್ಯಪದವು ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ನ್ಯಾಯವಾದಿಗಳಾದ ಗುರುಪ್ರಸಾದ್ ಶೆಟ್ಟಿ, ಕೆ.ಮಹಾಬಲ ಶೆಟ್ಟಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪುಷ್ಪರಾಜ್ ಶೆಟ್ಟಿ, ಗೋವಾದ ಉದ್ಯಮಿ ಯಶವಂತ ಕೆಂಚನಬೆಟ್ಟು, ಪ್ರಗತಿಪರ ಕೃಷಿಕ ಕುಸುಮಾಕರ ಶೆಟ್ಟಿ ಕುರಿಯಾಳಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟದಡ್ಕ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ರಾಧಾಕೃಷ್ಣ ರೈ ಕೊಟ್ಟುಂಜ ಸ್ವಾಗತಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಹರಿಪ್ರಸಾದ್ ಡೆಚ್ಚಾರ್ ಹಾಗೂ ಪ್ರದೀಪ್ ಕಟ್ಟದಡೆ ಸಹಕರಿಸಿದರು.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...