ಬಂಟ್ವಾಳ: ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಯರ್ ಮಾರ್ ಎಂಬಲ್ಲಿ ನಡೆದಿದ್ದು , ಇದು ಆತ್ಮಹತ್ಯೆ ಯಲ್ಲ ಕೊಲೆ ಪ್ರಕರಣ ಎಂದು ಸಂಬಂಧಿಕರು ಠಾಣೆ ಗೆ ದೂರು ನೀಡಿದ ಘಟನೆ ಮೇ.2 ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಉಮೇಶ್ ವೃತ್ತಿಯಲ್ಲಿ ಕೃಷಿಕನಾಗಿದ್ದು, ಅವರಿಗೆ ವಿಪರೀತ ಕುಡಿತದ ಚಟವಿದ್ದು, ಹೆಂಡತಿ ಮಕ್ಕಳ ಜೊತೆ ಜಗಳವಾಡುತ್ತಿದ್ದರು, ರಾತ್ರಿ ವೇಳೆ ಮನೆಗೆ ಬಂದವರು ಊಟ ಮಾಡಲು ಅನ್ನ ಬಡಿಸಿ ತಂದು ಕೊಟ್ಟಿಲ್ಲ ಎಂಬ ಕಾರಣ ಕ್ಕೆ ಜಗಳವಾಡಿ ಮನೆಯಿಂದ ಹೊರಹೋದವರು ಬಂದಿಲ್ಲ ಎಂದು ಹುಡುಕಾಡಿದಾಗ ಮನೆಯ ಪಕ್ಕದ ದನದ ಕೊಟ್ಟಿಗೆ ಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಗೆ ಪ್ರಯತ್ನಿಸಿದ್ದರು, ಕೂಡಲೇ ಪತ್ನಿ ಹಾಗೂ ಮಕ್ಕಳು ಸೇರಿ ತುಂಬೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಮನೆಯವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮೃತಪಟ್ಟ ವ್ಯಕ್ತಿ
ಉಮೇಶ್ ಪೂಜಾರಿ (55) ಎಂದು ಗುರುತಿಸಲಾಗಿದೆ.
ಆದರೆ ಉಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಲ್ಲ, ಅದೊಂದು ಕೊಲೆ ಎಂದು
ಮೃತರ ತಮ್ಮ ಆನಂದ ಪೂಜಾರಿ ಅವರು ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಸ್ಥಳಕ್ಕೆ ನಗರ ಠಾಣಾ ಎಸ್. ಐ.ಅವಿನಾಶ್ ಬೇಟಿ ನೀಡಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.