


ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಮ್ಟಾಡಿ ಗ್ರಾಮ ಪಂಚಾಯತ್ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ ’’ ಕಾರ್ಯಕ್ರಮವು ೧೦-೦೫-೨೦೨೨ನೇ ಮಂಗಳವಾರ ಮಾಜಿ ಸಚಿವ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮುಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ನಡೆಸುವ ದಬ್ಬಾಳಿಕೆಯನ್ನು ಯಾವತ್ತೂ ಸಹಿಸಲಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರ ಮೇಲೆ ವಿನಃ ಕಾರಣ ದೂಷಣೆ ಮಾಡದಿರುವುದೇ ನನ್ನ ರಾಜಕೀಯ ರಾಜಧರ್ಮ ಎಂದು ನುಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಪಕ್ಷದ ಕಾರ್ಯ ಕರ್ತರು ಶಿಸ್ತಿನ ಸಿಪಾಯಿಯಂತೆ ಪಕ್ಷಕ್ಕೆ ಆಸರೆಯಾಗಿ ನಿಂತು ತನ್ನನ್ನು ತಾನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರ, ಅಮ್ಟಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಕುರಿಯಾಳ ವಲಯ ಅಧ್ಯಕ್ಷರಾದ ವಲೇರಿಯನ್ ಪಿಂಟೋ, ನೂತನ ಕುರಿಯಾಳ ವಲಯ ಅಧ್ಯಕ್ಷರಾದ ಅಂತೋನಿ ರೆಬೆಲ್ಲೋ, ಬೂತ್ ಅಧ್ಯಕ್ಷರಾದ ರಾಕೇಶ್ ಡಿಸೋಜ, ಪ್ರಾನ್ಸಿಸ್ ಸಲ್ಡಾನ, ರಿಚಾರ್ಡ್ ಮಿನೇಜಸ್, ಗಣೇಶ್ ಶೆಟ್ಟಿ, ಕೇಶವ, ಡೋನಲ್ಡ್ ¨ರೊಟ್ಟೋ, ಕಾರ್ಯದರ್ಶಿಗಳಾದ ಪ್ರಭಾಕರ್, ಅರುಣ್ ಪಿಂಟೋ, ನಿತ್ಯಾನಂದ ಕಲಾಯಿ, ರಮೇಶ್ ಪೂಜಾರಿ, ಐರಿನ್, ಜನಾರ್ದನ ಪೂಜಾರಿ, ಮೋಹನ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪೂರ್ಣಿಮಾ, ಮುಖಂಡರಾದ ಪ್ಲೋಸಿ ಡಿಸೋಜ , ವೆಂಕಪ್ಪ ಪೂಜಾರಿ ,ರಾಮಣ್ಣ ಪೂಜಾರಿ, ರಾಯ್ ಕಾರ್ಲೊ,ರಾಮಚಂದ್ರ ಕಾಯರ್ಮಾರ್, ನಾಗೇಶ್ ಪೂಜಾರಿ, ತಾರನಾಥ ಪೂಜಾರಿ, ತೋಮಸ್ ಸಲ್ಡಾನ, ಮಾರ್ಕ್ ಬರೆಟ್ಟೋ, ವಿನ್ಸೆಂಟ್ ಅಶೋಕ್ ಲೋಬೋ, ಫೆಲಿಕ್ಸ್ ಪಿಂಟೋ, ಲೋಯ್ಡ್ ಮೋನೋಹರ್ ಡಿಕಾಸ್ಟ, ಸತೀಶ್, ಸ್ಟಾö್ಯನಿ ಮಿನೇಜಸ್ ಉಪಸ್ಥಿತರಿದ್ದರು.


