ಬಂಟ್ವಾಳ: ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ, ಬ್ಯಾಂಕ್ ಉದ್ಯೋಗಿ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಅವರು ಮೇ ೨೧ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೃತರು ಕಬಡ್ಡಿ ಆಟಗಾರರಾಗಿ ವಿಶೇಷ ಸಾಧನೆ ಮಾಡಿದ್ದು, ೨೦೦೭ರ ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡದ ಉತ್ತಮ ಆಟಗಾರನಾಗಿ ಮೂಡಿಬಂದಿದ್ದರು. ಏಕಲವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸಮ್ಮಾನಗಳನ್ನು ಪಡೆದಿದ್ದಾರೆ.