Monday, October 23, 2023

ರಾಷ್ಟ್ರ ಮಟ್ಟದ ವುಶು ಸ್ಪರ್ಧೆ ಯಲ್ಲಿ ಪದಕ ಗೆದ್ದ ಅವಳಿ ಸಹೋದರಿಯರು

Must read

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವುಶು ( ಭಾರತ ಸರ್ಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮಾನ್ಯತೆ ಪಡೆದ ಕ್ರೀಡೆ ) ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಅವ್ನಿ ಎನ್ ಮುಡಿಪು ( ಸಬ್ ಜೂನಿಯರ್ ಬಾಲಕಿಯರ 45 ಕೆ.ಜಿ ವಿಭಾಗ ) ಮತ್ತು ಅನ್ಶಿ ಎನ್ ಮುಡಿಪು ( ಸಬ್ ಜೂನಿಯರ್ ಬಾಲಕಿಯರ 48 ಕೆ.ಜಿ ವಿಭಾಗ ) ಸ್ಯಾನ್ಸೋ (ಪೈಟಿಂಗ್ ) ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ, ಇವರು ಜಿಲ್ಲೆಯ ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ಇದರ ವಿದ್ಯಾರ್ಥಿಗಳಾಗಿದ್ದು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಶ್ರೀ ನಿರಂಜನ್ ಮುಡಿಪು ಮತ್ತು ಶ್ರೀಮತಿ ಸ್ವರ್ಣ ಇವರ ಅವಳಿ ಪುತ್ರಿಯರು.

More articles

Latest article