


ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆಯ ಬಾಳ್ತಿಲ ಗ್ರಾಮದ ಸುದೆಕ್ಕಾರು ಎಂಬಲ್ಲಿ
ಶ್ರೀ ರಕ್ತೇಶ್ವರಿ ಅಮ್ಮನವರ ಹಾಗೂ ಪರಿವಾರ ಗುಳಿಗ ದೈವದ ನವೀಕರಣ ಪುನಃ ಪ್ರತಿಷ್ಠೆ ಮಹಾಕಲಶೋತ್ಸವ ಕಾರ್ಯಕ್ರಮ ಜೂನ್ 1 ರಿಂದ ಜೂನ್ 3 ರ ವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಹಾಗೂ ಮಹಾಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ! ಕಲ್ಲಡ್ಕ ಡಾ! ಪ್ರಭಾಕರ ಭಟ್ ಅವರು ಹೇಳಿದರು.
ಅವರು ಬಾಳ್ತಿಲ ಗ್ರಾಮದ ಸುದೆಕ್ಕಾರು ದೈವದ ಸಾನಿಧ್ಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಂಡಾರದ ಮನೆಯಲ್ಲಿ ಇಟ್ಟ ಜ್ಯೋತಿಷ್ಯ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ಜೀರ್ಣೋದ್ಧಾರಕ್ಕೆ ಯೋಜನೆ ಮಾಡಿದ್ದು , ಪ್ರಸ್ತುತ ಭವ್ಯವಾದ ಗುಡಿ ನಿರ್ಮಾಣ ವಾಗಿ ಮಹಾಕಲಶೋತ್ಸವ ಕ್ಕೆ ಸಿದ್ದತೆ ಮಾಡಲಾಗಿದೆ.
3 ಕೋಟಿ ಗಿಂತಲೂ ಅಧಿಕ ವೆಚ್ಚದಲ್ಲಿ ಇಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.
ಜೂನ್ 1 ರಂದು ರಾಮಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮಧ್ಯಾಹ್ನ 2.30 ಕ್ಕೆ ಹೊರಡಲಿದೆ ಎಂದು ಅವರು ಹೇಳಿದರು.
ಸಂಜೆ 5 ಗಂಟೆ ಗೆ ಶ್ರೀ ಪಳನೀರು ಶ್ರೀಪತಿ ತಂತ್ರಿಗಳ ನೇತ್ರತ್ವದ ಲ್ಲಿ ಆಲಯ ಸ್ವೀಕಾರ ಜೊತೆಗೆ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಜೂನ್ 2 ರಂದು ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಗಣಹೋಮ ಹಾಗೂ ವಿವಿಧ ಪೂಜೆ ಗಳು ನಡೆಯಲಿದೆ.
ಸಂಜೆ 7 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಜೂನ್ 3 ರಂದು ಬೆಳಿಗ್ಗೆ 8 .10 ರ ಮಿಥುನ ಲಗ್ನದಲ್ಲಿ ರಕ್ತೇಶ್ವರಿ ಅಮ್ಮನವರ ಮಂಚಪ್ರತಿಷ್ಠೆ, ಶ್ರೀ ಗುಳಿಗ ದೈವದ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತಾಭಿಷೇಕ,ಪರಿಕಲಶಾಭಿಷೇಕ,ಶಿಖರ ಪ್ರತಿಷ್ಠೆ,ಮಹಾಕಲಶಾಭಿಷೇಕ , ಪರ್ವ ಸೇವೆ ನಡೆಯಲಿದೆ .
ಬೆಳಿಗ್ಗೆ 11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ.
ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷ ತೆ ವಹಿಸಲಿದ್ದಾರೆ.
ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ್ ಮುನಿಯಂಗಳ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 7 ರಿಂದ ಶ್ರೀ ರಕ್ತೇಶ್ವರಿ ಅಮ್ಮನವರ ನೇಮ ಹಾಗೂ ಗುಳಿಗ ದೈವದ ಕೋಲ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ದಾಮೋದರ ಶೆಟ್ಟಿ ಸುದೆಕ್ಕಾರು,
ಜಯಾನಂದ ಆಚಾರ್ಯ, ಕಂಟಿಕ ಗೋಪಾಲ ಶೆಣೈ, ಪಿ.ಎಸ್.ಮೋಹನ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮಣ್ಣ ಶೆಟ್ಟಿ, ಮುತ್ತಣ್ಣ ಶೆಟ್ಟಿ, ದಿವಾಕರ ಶೆಟ್ಟಿ, ಕ.ಕೃಷ್ಣಪ್ಪ ಆಚಾರ್ಯ, ಹಿರಣ್ಮಯಿ ಗಣೇಶ್ ಶೆಟ್ಟಿ ಸುದೆಕ್ಕಾರು, ಆನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


