ಬೆಂಜನಪದವು ಪ್ರೌಢಶಾಲೆ ಯ ಹಳೆಯ ವಿದ್ಯಾರ್ಥಿ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿಯವರು ಶಾಲೆಗೆ ದಿಢೀರ್ ಭೇಟಿನೀಡಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವಂತೆ ಸಲಹೆ ನೀಡಿದರು ತಾನು ಕಲಿತ ಶಾಲೆಯ ಭೌತಿಕ ಅಗತ್ಯತೆಗಳನ್ನು ಪೂರೈಸಲು ನೆರವು ನೀಡುವುದಾಗಿ ಘೋಷಿಸಿದರು
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಪೋಷಕರ ಸಭೆ ,,ಎಸ್ ಎಸ್ ಎಲ್ ಸಿ ಸಾಧಕರಿಗೆ ಅಭಿನಂದನೆ ಮತ್ತು ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯುತ್ತಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ, ದಾನಿ ಉಮೇಶ್ ಸಾಲ್ಯಾನ್, ಶಶಿಧರ ಕೊಟ್ಟಾರಿ,
ಶೀನ ಬೆಳ್ಚಡ, ಸಂಸ್ಥೆಯ ಉಪಪ್ರಾಂಶುಪಾಲರಾದ ಅನಂತಪದ್ಮನಾಭ ಶಿಬರೂರು ಎಸ್ ಡಿ ಎಮ್ ಸಿ ಸದಸ್ಯರು ಉಪಸ್ಥಿತರಿದ್ದರು