ಬಂಟ್ವಾಳ: ಬಂಟ್ವಾಳದ ವೈದ್ಯರೊಬ್ಬರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವ ನೆಪದಿಂದ ಅ್ಯಪ್ ವೊಂದನ್ನು ಡೌನ್ ಲೋಡ್ ಮಾಡಿಸಿ ಒಟ್ಟು ೧.೬೫ ಲಕ್ಷ ರೂ. ಕನ್ನಹೊಡೆದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯು ಎ. ೨೯ರಂದು ಸಂಜೆ ೫.೩೦ರ ವೇಳೆಗೆ ವೈದ್ಯ ಡಾ.ಬಿ.ಅಶ್ವಿನ್ ಬಾಳಿಗಾ ಅವರಿಗೆ ಕರೆ ಮಾಡಿ ನಿಮ್ಮ ಜಿಯೋ ನಂಬರ್ ಅಪ್ ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ ಕ್ವಿಕ್ ಇಝಿ ಆ್ಯಪ್ ಡೌನ್ ಲೋಡ್ ಮಾಡಿಸಿ ಬಳಿಕ ವೈದ್ಯರ ಬಳಿ ಮೈ ಜಿಯೋ ಆ್ಯಪ್ ನಲ್ಲಿ ೧೦ ರೂ. ರೀಚಾರ್ಜ್ ಮಾಡುವಂತೆ ತಿಳಿಸಿದ್ದಾನೆ.
ಅದರಂರೆ ವೈದ್ಯರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಆ್ಯಪ್ ಗೆ ಹಾಕಿ ರೀಚಾರ್ಜ್ ಮಾಡಿರುತ್ತಾರೆ. ಬಳಿಕ ಅವರ ಖಾತೆಯಿಂದ ತಲಾ ೧೦ ಸಾವಿರ ರೂ.ಗಳಂತೆ ೩ ಬಾರಿ ಹಾಗೂ ೪೫ ಸಾವಿರ ರೂ.ಗಳಂತೆ ೩ ಬಾರಿ ಹಣವನ್ನು ಎರಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.