ವಿಟ್ಲ: ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಘಟಕ ಶ್ರೀ ಸ್ಕಂದ ಬಾಲ ಕಲಾವೃಂದ ಅಳಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಅಳಿಕೆ ಯುವಕ ಮಂಡಲ, ನವಚೇತನ ಯುವತಿ ಮಂಡಲ ಚೆಂಡುಕಳ ,ಯಕ್ಷ ಪೋಷಕರು ಅಳಿಕೆ ಇವರ ಸಹಯೋಗದೊಂದಿಗೆ ಸಂಸ್ಕಾರ ಸೌರಭ ಮಕ್ಕಳ ಮೂರು ದಿನಗಳ ಬೇಸಿಗೆ ರಜಾ ಹಬ್ಬ ಶಿಬಿರವು ಅಳಿಕೆ ಗ್ರಾಮದ ಚೆಂಡುಕಳ ಯುವಕ ಮಂಡಲದ ಸಭಾ ಭವನದಲ್ಲಿ ಮಕ್ಕಳಿಂದ ದೀಪ ಬೆಳಗಿಸಿ ,ಗಿಡಕ್ಕೆ ನೀರು ಹಾಕಿ,ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಉದ್ಘಾಟನೆಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಕೋಶಾಧಿಕಾರಿ ಸಂಕಪ್ಪ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಮಂಜು ವಿಟ್ಲ, ನಿವೃತ್ತ ಪ್ರಾಧ್ಯಾಪಕರಾದ ಪೂವಪ್ಪ ಶೆಟ್ಟಿ ಅಳಿಕೆ , ಶ್ರೀಧರ್ ಅಳಿಕೆ ,ಶಮುಖ್ಯಗುರುಗಳಾದ ಈಶ್ವರ ನಾಯ್ಕ ,ಪ್ರಾಧ್ಯಾಪಕರಾದ ಯಾದವ ನಡುಗುತ್ತು, ಅಳಿಕೆ ವ್ಯವಸಾಯ ಸೇವಾ ಸಹಕಾರಿಯ ಅಧ್ಯಕ್ಷರಾದ ಕಾನ ಈಶ್ವರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕುಣಿತ ಭಜನೆ ತರಬೇತುದಾರರಾದ ಯೋಗೀಶ್ ನರಿಕೊಂಬು, ಯೋಗ ತರಬೇತುದಾರರಾದ ನಳಿನಾಕ್ಷಿ ಆಚಾಯ೯ ಮಾಣಿಲ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಿಗೆ ಅರಶಿನ ಕುಂಕುಮ ಹೂ ಮತ್ತು ಸಿಹಿ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಶಿಬಿರಾರ್ಥಿ ಮನ್ವಿತ್ ರವರು ಸ್ವಾಗತಿಸಿದರು . ಸಿಂಚನ ಅಳಿಕೆ ಶಿಬಿರ ಧ್ಯೇಯಗೀತೆ ಹಾಡಿದರು, ಶಿಬಿರಾರ್ಥಿ ಕೀರ್ತನ ವಂದನಾರ್ಪಣೆಗೈದರು. ಶಿಬಿರಾರ್ಥಿ ತೃಶಾಲಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದ ಸಂಯೋಜಕರಾದ ಸದಾಶಿವ ಅಳಿಕೆ, ನಿವಾ೯ಹಕರಾದ ಲೀಲಾವತಿರಾಮಗೌಡ, ಅಮಿತ ಸಂಜೀವ, ರಜನಿಹರೀಶ್ ಶೆಟ್ಟಿ, ಕುಮಾರಿ ಕಾವ್ಯಶ್ರೀ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here