Thursday, October 19, 2023

ಬಿ.ಸಿ.ರೋಡು: ನಿಲ್ದಾಣದ ನೀರು ನಿಲ್ಲುವ ಸಮಸ್ಯೆಗೆ ಮುಕ್ತಿ

Must read

ಬಂಟ್ವಾಳ: ಕಳೆದ ಹಲವು ವರ್ಷಗಳಿಂದ ಹಾಗೇ ಉಳಿದು ಜನರಿಗೆ ಸಮಸ್ಯೆಯಾಗಿದ್ದ ಬಿ.ಸಿ.ರೋಡು ಬಸ್ಸು ನಿಲ್ದಾಣದ ಬಳಿಯ ನೀರು ನಿಲ್ಲುವ ಸಮಸ್ಯೆಗೆ ಡಾಮಾರು ಹಾಕುವ ಮೂಲಕ ಪರಿಹಾರ ಕಲ್ಪಿಸಲಾಗಿದೆ.

ಮಂಗಳೂರು ಭಾಗಕ್ಕೆ ತೆರಳುವ ಬಸ್ಸುಗಳು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಬಂದು ಫ್ಲೈಓವರ್ ತಳಭಾಗದಲ್ಲಿ ನಿಲ್ಲುತ್ತಿದ್ದು, ಸರ್ವೀಸ್ ರಸ್ತೆಯಲ್ಲಿ ಕಾಮಗಾರಿ ತೊಂದರೆಯಿಂದ ಮಳೆ ನೀರು ಪೂರ್ತಿ ನಿಂತು ತೊಂದರೆಯಾಗಿತ್ತು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಕ್ಷಣ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಚರಂಡಿಯ ಸ್ಲ್ಯಾಬ್ ಗೆ ಕೊರೆದರೂ ನೀರು ಹೋಗಿತ್ತಿರಲಿಲ್ಲ. ಹೀಗಾಗಿ ಡಾಮಾರು ಹಾಕಿ ಪರಿಹಾರ ಕಲ್ಪಿಸಲಾಗಿದೆ.

More articles

Latest article