ವಿಟ್ಲ: ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬ ಸಮಿತಿ ಆಶ್ರಯದಲ್ಲಿ,ಚಿಣ್ಣರ ಮನೆ ವಿಟ್ಲ, ಸರಕಾರಿ ಮಾದರಿ ಶಾಲೆಯ ಸಹಯೋಗದಲ್ಲಿ ಸೋಮವಾರ ವಿಟ್ಲ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹತ್ತು ದಿನಗಳ ರಾಜ್ಯ ಮಟ್ಟದ ಉಚಿತ ಬೇಸಿಗೆ ಶಿಬಿರ ಉದ್ಘಾಟನೆಗೊಂಡಿತು.
ಕೃಷ್ಣಯ್ಯ ಕೆ. ವಿಟ್ಲ ಅರಮನೆ ಶಿಬಿರವನ್ನು ಉದ್ಘಾಟಿಸಿದರು.
ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಡಾ. ಗೀತ ಪ್ರಕಾಶ್, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷರು ಹರೀಶ್ ಸಿ.ಹೆಚ್, ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ದಾಸಪ್ಪ ಪೂಜಾರಿ, ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರೂಪರಾಜ್ , ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿಯ ಉಪಾಧ್ಯಕ್ಷ ಬಾಬು ಕೆ, ಗೌರವಾಧ್ಯಕ್ಷ ಪ್ರಕಾಶ್ ವಿಟ್ಲ, ಶಿಬಿರದ ಸಂಪನ್ಮೂಲ ವ್ಯಕ್ತಿ ಚಿತ್ರಕಲಾ ಅಧ್ಯಾಪಕ ಶಿವಗಿರಿ ಕಲ್ಲಡ್ಕ, ವಿಟ್ಲ ಬಿಲ್ಲವ ಸಂಘ, ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಿತಿಯ ಸಂಜೀವ ಪೂಜಾರಿ ಎಂ.ಎಸ್ ಸ್ವಾಗತಿಸಿದರು. ಅಧ್ಯಕ್ಷರು ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ವಂದಿಸಿದರು. ಆರ್ ಕೆ ಕಲಾಸಂಸ್ಥೆ ನಿರ್ದೇಶಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಹತ್ತು ದಿನಗಳ ಶಿಬಿರದಲ್ಲಿ ವಿವಿಧ ರೀತಿಯ ಕ್ರಾಫ್ಟ್ ವರ್ಕ್, ಮುಖವಾಡ ತಯಾರಿ, ಅಭಿನಯ ಕಲೆ, ನೃತ್ಯ, ಸಾಹಿತ್ಯ ಇನ್ನಿತರ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯಲಿದೆ.