Tuesday, April 9, 2024

ವಿಹಿಂಪ, ಭಜರಂಗದಳ ವತಿಯಿಂದ ಪೊಳಲಿಗೆ ಪಾದಾಯಾತ್ರೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ
ಎ. 03 ರಂದು ಮುಂಜಾನೆ 6 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂಟ್ವಾಳ ತಾಲೂಕಿನ ಮೂರು ಕಡೆಗಳಿಂದ ಪಾದಾಯಾತ್ರೆ ನಡೆಸಿದರು.
ಮಹಿಳೆಯರು ಮಕ್ಕಳು , ಯುವಕರು ಸೇರಿದಂತೆ ತಾಲೂಕಿನ ಸಾವಿರಾರು ಮಂದಿ ಈ ಪಾದಾಯಾತ್ರೆ ಯಲ್ಲಿ ಪಾಲ್ಗೊಂಡರು.

ವಿಹಿಂಪ ದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಈ ಸಂದರ್ಭದಲ್ಲಿ ಮಾತನಾಡಿ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಲೋಕಕಲ್ಯಾರ್ಥವಾಗಿ ಪಾದಯಾತ್ರೆ ನಡೆದಿದ್ದು, ಹಿಂದೂ ಸಮಾಜದ ಸಂಸ್ಕಾರ , ಸಂಸ್ಕ್ರತಿಯನ್ನು ತಲೆತಲಾಂತರದವರೆಗೂ ಉಳಿಸುವ ಜವಬ್ದಾರಿ ಯುವ ಸಮುದಾಯದ ಮೇಲೆ ಇದೆ.
ಯಾವುದೇ ಪಾಶ್ಚಾತ್ಯ ದೇಶಗಳ ಪ್ರಭಾವಕ್ಕೆ ಒಳಗಾಗಿ ನಾವು ನಮ್ಮತನವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು, ದೇವಾಲಯಗಳಲ್ಲಿ ಏಕಾಗ್ರತೆಯ ನಿಟ್ಟಿನಲ್ಲಿ ಪರಿಶುಧ್ದವಾದ ಮನಸ್ಸಿನ ಜೊತೆಯಲ್ಲಿ ಶುಭ್ರವಾದ ವಸ್ತ್ರಗಳ ತೊಡುಗೆಯಾಗಬೇಕು ಎಂದು ಅವರು ಹೇಳಿದರು.
ಹಿರಿಯರ ತ್ಯಾಗ ಬಲಿದಾನಗಳು ದೇಶದ ಭದ್ರತೆಯ ದೃಷ್ಟಿಯಿಂದ ಆಗಿರುವುದನ್ನು ನಾವು ಮೈಮರೆಯದೆ ದೇಶದ ಭಾವನಾತ್ಮಕ ವಿಚಾರಗಳಿಗೆ ನಾವು ಒಂದಾಗಬೇಕು ಎಂದು ಅವರು ಹೇಳಿದರು.
ಪ್ರಮುಖ ಬೇಡಿಕೆಗಳು

1.ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟು ನಿಟ್ಜಾಗಿ ಜಾರಿಗೊಳಿಸಬೇಕು.
2. ದೇವಸ್ಥಾನದ ವತಿಯಿಂದ ಒಂದು ಗೋಶಾಲೆಯ ನಿರ್ಮಾಣ ಹಾಗೂ ನಿರ್ವಹಣೆ
3. ದೇವಸ್ಥಾನದ ಜಾತ್ರ ಮಹೋತ್ಸವ/ಉತ್ಸವಾದಿಗಳ ಸಂಧರ್ಭಗಳಲ್ಲಿ ದೇವಸ್ಥಾನದ ಪರಿಸರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಅವಕಾಶ
4. ದೇವಸ್ಥಾನದ ವತಿಯಿಂದ ಹಿಂದೂ ಧಾರ್ಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಬಾಲ ಸಂಸ್ಕಾರ ಕೇಂದ್ರಗಳನ್ನು ತೆರೆಯುವುದು.
ಈ ರೀತಿಯ ಪ್ರಮುಖ ಬೇಡಿಕೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ/ವ್ಯವಸ್ಥಾಪನ ಸಮಿತಿ ಮೂಲಕ ಜಾರಿ ತರುವಂತೆ ಆಗ್ರಹಿಸುತ್ತಾ ಲೋಕ ಕಲ್ಯಾಣಾರ್ಥವಾಗಿ 03.ರಂದು ಆದಿತ್ಯವಾರ ಬೆಳಗ್ಗೆ 6 ಸರಿಯಾಗಿ ತಾಲೂಕಿನ ಪ್ರಮುಖ ದೇವಸ್ಥಾನವಾದ ಶ್ರೀ ಕ್ಷೇತ್ರ ಪೊಳಲಿಗೆ 3 ಕಡೆಗಳಿಂದ ಏಕ ಕಾಲದಲ್ಲಿ ಪಾದಯಾತ್ರೆ ನಡೆಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಿಗೆ ಈ ಪ್ರಮುಖ ಬೇಡಿಗಳ ಬಗ್ಗೆ ಮನವಿ ನೀಡಲಾಯಿತು.
ಬಿ. ಸಿ. ರೋಡ್ ಕೈಕಂಬ ಪೊಳಲಿ ದ್ವಾರ, ಕಡೆಗೋಳಿಯ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರಗಳ ಬಳಿ 7000 ಕ್ಕೂ ಹೆಚ್ಚು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಭಜರಂಗದಳದ ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು, ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಸಂಘಟನೆಯ ಪ್ರಮುಖರಾದ ಸುರೇಶ್ ಬೆಂಜನಪದವು, ದೀಪಕ್ ಅಜೆಕಲ, ಸಂತೋಷ್ ಕುಲಾಲ್ ಸರಪಾಡಿ, ಪ್ರವೀಣ್ ಕುಲಾಲ್, ಲೋಹಿತ್ ಪೊಡಿಕಲ, ಕಿರಣ್ ಕಾಪಿಕಾಡ್, ವಿನಿತ್ ತುಂಬೆ, ಪ್ರಸಾದ್ ಬೆಂಜನಪದವು ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.

More from the blog

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

ದಕ್ಷಿಣ ಕನ್ನಡ: ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್‌ : 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ...

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...