ಬಂಟ್ವಾಳ: ಅಪಸ್ಮಾರ-ನಿಮೋನಿಯಾ ಖಾಯಿಲೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡನಡುಗೋಡು ಗ್ರಾಮದ ಕರೆಂಕಿ ನಿವಾಸಿ ೮ರ ಹರೆಯದ ನಿಶಾನ್ ಅವರ ಚಿಕಿತ್ಸೆಗಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಹಿಂದೂ ಜಾಗರಣ ವೇದಿಕೆ ಶ್ರೀ ದುರ್ಗಾ ಘಟಕದ ವತಿಯಿಂದ ೧.೦೫ ಲಕ್ಷ ರೂ.ಗಳನ್ನು ನೀಡಲಾಯಿತು.
ಕರೆಂಕಿ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕ ಮದನ್ ಭಟ್ ಅವರು ಪ್ರಾರ್ಥನೆ ನೆರವೇರಿಸಿ ಮಗುವಿನ ತಾಯಿ ಹರಿಣಾಕ್ಷಿ ಅವರಿಗೆ ಹಸ್ತಾಂತರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಗೌಡ, ಹಿಂಜಾವೇ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಕರೆಂಕಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ಹಿಂಜಾವೇ ಘಟಕ ಗೌರವಾಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಸದಸ್ಯ ಪೂವಪ್ಪ ಮೆಂಡನ್, ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಕುಲಾಲ್, ಹಿಂಜಾವೇ ವಲಯ ಅಧ್ಯಕ್ಷ ಚಿದಾನಂದ ಕುಲಾಲ್, ವಸಂತ ಗೌಡ ಹಳೆಗೇಟು, ವಿಠಲ ಡಿ, ನಾಗೇಶ್ ಡಿ, ಶರಣ್ ಕಾಮಾಜೆ, ಗಣೇಶ್ ಗೌಡ, ತಿರುಮಲೇಶ್ ಕುಲಾಲ್, ಗಂಗಾಧರ ಕುಲಾಲ್, ಕಿಶೋರ್ ಗೌಡ, ಮನೋಜ್ ಕರೆಂಕಿ, ಧನುಷ್ ಕರೆಂಕಿ, ಲೋಕೇಶ್ ತಮ್ಮು, ತೇಜಸ್, ವಿಶ್ವನಾಥ ಕುಜಿಲ್‌ಬೆಟ್ಟು, ನವೀನ್ ಕುಜಿಲ್‌ಬೆಟ್ಟು, ಕರುಣಾಕರ ಕುಜಿಲ್‌ಬೆಟ್ಟು, ಪ್ರವೀಣ್ ಕುಜಿಲ್‌ಬೆಟ್ಟು, ಧನರಾಜ್ ಕರೆಂಕಿ, ಬಾಲಕೃಷ್ಣ ಕೊಂಬರಬೈಲು, ಸತೀಶ್ ಕುಲಾಲ್, ಶಿವಪ್ರಸಾದ್, ಕೀರ್ತನ್ ಕರೆಂಕಿ, ಸಂತೋಷ್ ದಾಸರಕೋಡಿ, ಅವಿನಾಶ್ ಕರೆಂಕಿ, ಆನಂದ ರಾಮನಗರ, ರಾಧಾಕೃಷ್ಣ ಗೌಡ ಮೊದಲಾದವರಿದ್ದರು.