ಮಾಣಿ : ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಬೆಂಗಳೂರು ನಿವಾಸಿಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
![](https://nammabantwala.com/wp-content/uploads/2024/03/IMG-20240322-WA0035-jpg.webp)
ಬೆಂಗಳೂರು ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಮೃತರಾಗಿದ್ದಾರೆ. ಚಾಲಕ ಪ್ರಜ್ವಲ್ (22) ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಬರುತ್ತಿದ್ದ ಕಾರನ್ನು ಪ್ರಜ್ವಲ್ ಚಲಾಯಿಸಿದ್ದು, ಲಕ್ಷ್ಮಣ ಆಚಾರಿ ಅವರು ಪುತ್ರಿಯ ವಿವಾಹ ಆಮಂತ್ರಣ ನೀಡುವ ನಿಟ್ಟಿನಲ್ಲಿ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ.
![](https://nammabantwala.com/wp-content/uploads/2024/04/WhatsApp-Image-2024-04-05-at-8.46.41-AM-jpeg.webp)
ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನವರಿಗೆ ಮಾಣಿ ಜಂಕ್ಷನ್ ನಲ್ಲಿ ರಸ್ತೆ ತಪ್ಪಿ ಬೆಂಗಳೂರು ಮಾರ್ಗದಲ್ಲಿ ಮುಂದುವರಿದ್ದಾರೆ. ಈ ಸಮಯ ಬುಡೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಪ್ರೆಂಡ್ಸ್ ವಿಟ್ಲ ತಂಡ ವಾಹನವನ್ನು ಸ್ಥಳದಿಂದ ತೆರವು ಮಾಡಿ ಠಾಣೆಗೆ ತಲುಪಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ.