Saturday, October 21, 2023

ಎ.17 ರಂದು ನಾವೂರದ ಕೂಡಿಬೈಲಿನಲ್ಲಿ ಮೂಡೂರು-ಪಡೂರು ” ಬಂಟ್ವಾಳ” ಬಯಲು ಕಂಬಳ: ಮಾಜಿ‌ ಸಚಿವ ಬಿ.ರಮಾನಾಥ ರೈ

Must read

ಬಂಟ್ವಾಳ: ಎ.17 ರಂದು ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಕೂಡಿಬೈಲಿನಲ್ಲಿ 11 ನೇ ವರ್ಷದ ಮೂಡೂರು-ಪಡೂರು ” ಬಂಟ್ವಾಳ ” ಜೋಡು ಕರೆ ಬಯಲು ಕಂಬಳ ನಡೆಯಲಿದೆ ಎಂದು ಮಾಜಿ ಸಚಿವ ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಅವರು ಹೇಳಿದರು.
ಕಡಿಮೆ ಅವಧಿಯಲ್ಲಿ ಕಂಬಳ ದ ಕರೆ ನಿರ್ಮಾಣ ಮಾಡಿ , ಕಂಬಳ ಆಯೋಜನೆ ಮಾಡಲಾಗಿದ್ದು, ಕಂಬಳ ಇತಿಹಾಸದಲ್ಲಿ ಇದು ಪ್ರಥಮ ಎಂದು ಅವರು ಹೇಳಿದರು.


ಬಯಲು ಕಂಬಳದಲ್ಲಿ ವಿಶಿಷ್ಠವಾದ ವಿನೂತನವಾದ ಶೈಲಿಯಲ್ಲಿ ನಡೆಯುತ್ತಿದ್ದ, ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿನಡೆಯುತ್ತಿದ್ದ ಮೂಡೂರು-ಪಡೂರು ಬಯಲು ಕಂಬಳ ಕೆಲವು ವರ್ಷ ಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು.
ಆದರೆ ಕಂಬಳ ಅಭಿಮಾನಿಗಳ ಆಶಯದಂತೆ ಮತ್ತೆ ನಾವೂರದ ಲ್ಲಿ “ಬಂಟ್ವಾಳ ಕಂಬಳ “ಅದೇ ರೀತಿಯಲ್ಲಿ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಪಕೃತಿದತ್ತ ರಮಣೀಯ ಸ್ಥಳದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಸೊಲೂರು ಪೀಠಾಧಿಪತಿ ಶ್ರೀ ಶ್ರೀಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ. ಶ್ರೀ.ಶ್ರೀ ಮೋಹನದಾಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೊನಿ ಚರ್ಚ್ ನ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೊ, ಕಾವಳಕಟ್ಟೆ ಹಝ್ರತ್ ಡಾ.ಮೌಲಾನ ಫಾಝೀರ್ ರಿಝ್ವಿ, ಸುಲ್ತಾನ್ ನಗರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಜ!ಮೊಹಮ್ಮದ್ ನಾಸೀಹ್ ದಾರಿಮಿ ಮೊದಲಾದ ವರು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಂಬಳ
ಅಧ್ಯಕ್ಷ ಪಿಯೂಸ್ ಎಲ್ .ರೋಡ್ರಿಗಸ್, ಕಂಬಳದ ಸಂಚಾಲಕಪದ್ಮಶೇಖರ್ ಜೈನ್
ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರದಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಉಪಾಧ್ಯಕ್ಷರಾಗಿ ಅವಿಲ್ ಮಿನೇಜಸ್, ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲ್ಯಾನ್, ಕಂಬಳ ಸಮಿತಿ ಪ್ರಮುಖರಾದ ಶಬೀರ್, ಡೆನ್ಜಿಲ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article