ಬಂಟ್ವಾಳ: ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿ.ಸಿ.ರೋಡು ಸೌಂದರ್ಯೀಕರಣದ ಕಾಮಗಾರಿ ಮತ್ತೆ ಆರಂಭಗೊಂಡಿದ್ದು, ಕೈಕುಂಜೆ ರಸ್ತೆ ನಿರ್ಮಾಣ ದ ಬಳಿಕ ಬಿ.ಸಿ.ರೋಡಿಗೆ ಹೊಸ ಲುಕ್ ಬಂದಿದೆ. ಇದರ ಮೂಲಕ ಬಿ.ಸಿ.ರೋಡಿನ ಫ್ಲೈ ಓವರ್ ಕೆಳಭಾಗದಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿದ್ಧ ಸ್ಥಳಕ್ಕೆ ಇಂಟರ್ ಲಾಕ್ ಅಳವಡಿಸುವ ಕಾರ್ಯಕ್ಕೆ ಅರ್ಥ್ ವರ್ಕ್ ಆರಂಭ ಗೊಂಡಿದೆ.
ಬಿ.ಸಿ.ರೋಡಿನ ಬಹು ವರುಷಗಳ ಸಮಸ್ಯೆಯಾಗಿರುವ ಪಾರ್ಕಿಂಗ್ ಸಮಸ್ಯೆ ಯ ಬಗೆಹರಿಕೆ ಸ್ಥಳೀಯಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದು, ಸೌಂದರ್ಯೀಕರಣದ ಮೂಲಕ ಪಾರ್ಕಿಂಗ್ ಸಮಸ್ಯೆಗೂ ಪರಿಹಾರ ದೊರಕುತ್ತದೆ ಎನ್ನಲಾಗಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕನಸಿನ ಬಿ.ಸಿ.ರೋಡು ಸೌಂದರ್ಯೀಕರಣ ಕಾಮಗಾರಿ ಮತ್ತೆ ಆರಂಭ ಗೊಂಡಿರುವುದು ಜನತೆಯಲ್ಲಿ ಆಶಾವಾದ ಚಿಗುರುವಂತೆ ಮಾಡಿದೆ.
ಜೊತೆಗೆ ಪ್ಲೈ ಓವರ್ ನ ಅಡಿಯಲ್ಲಿ ಹೈ ಟೆಕ್ ಮಾದರಿಯ ಶೌಚಾಲಯ ದ ಕಾಮಗಾರಿಗೂ ವೇಗ ದೊರಕಿದೆ.