ವಿಟ್ಲ: ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ತಲೆಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ
ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವದಲ್ಲಿ
ತಾಜುಲ್ ಉಲಮಾ ಟವರ್ ಉದ್ಘಾಟನೆ ಮತ್ತು ಪ್ರಥಮ ಸನದುದಾನ ಸಮ್ಮೇಳನ ಮಾರ್ಚ್ 25 ಮತ್ತು 26 ರಂದು ನಡೆಯಲಿದೆ ಎಂದು ಚೆಯರ್ ಮ್ಯಾನ್ ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ತಲೆಕ್ಕಿ ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಯು ಶಿಕ್ಷಣದ ಜೊತೆಗೆ ಸಾಮಾಜಿಕ ಸಾಂಸ್ಕೃತಿಕವಾಗಿಯೂ ಮುಂಚುಣಿಯಲ್ಲಿದೆ. ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲೆಕ್ಕಿ ಎಂಬಲ್ಲಿ ಸ್ಥಾಪಿಸಲಾಗಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಸ್ಟೇಟ್ ಶಿಕ್ಷಣ ನೀತಿಯಂತೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದ್ದು, ಮಹಿಳೆಯರನ್ನು ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಸಂಸ್ಥೆಯಿಂದ ಹಲವಾರು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು.
ಎಸ್ ಎಂ ಎ ರಾಜ್ಯ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಅವರು ಮಾತನಾಡಿ ಮಾರ್ಚ್ 25ರಂದು ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ಧ್ವಜಾರೋಹಣ ಮಾಡಲಿದ್ದಾರೆ. ಸಂದಲ್ ಮೆರವಣಿಗೆ ಮತ್ತು ಸ್ವಲಾತ್ ಮಜ್ಲೀಸ್ ನಡೆಯಲಿದ್ದು,
ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ತಂಙಳ್ ತಲೆಕ್ಕಿ ನೇತೃತ್ವ ವಹಿಸಲಿದ್ದು, ಅನಸ್ ಅಮಾನಿ ಪುಷ್ಪಗಿರಿ ಉದ್ಭೋದನೆ ಮಾಡಲಿದ್ದಾರೆ. ಮಾರ್ಚ್ 26ರಂದು ನಡೆಯಲಿರುವ ಅಲ್ ಮಶ್ ಹೂರ ಸನದ್ ಪ್ರದಾನ ಹಾಗೂ ಮಹಿಳಾ ಸಮಾವೇಶ ನಡೆಯಲಿದ್ದು, ಮದನೀಯಂ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಉದ್ಭೋದನೆ ಮಾಡಲಿದ್ದಾರೆ. ಸಂಜೆ ನಡೆಯುವ ತಾಜುಲ್ ಉಲಮಾ ಟವರ್ ಉದ್ಘಾಟನೆ ಮತ್ತು ಅಲ್ ಜಲಾಲಿ ಸನದುದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ. ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಝೈನುಲ್ ಉಲಮಾ ಮಾಣಿ ಉಸ್ತಾದ್, ಹುಸೈನ್ ಸ ಅದಿ ಕೆ.ಸಿ ರೋಡ್ ಎಂಕೆಎಂ ಶಾಫಿ ಸ ಅದಿ ಬೆಂಗಳೂರು, ಮಗಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ , ಯು.ಟಿ ಖಾದರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದೀಕ್ ಮದನಿ, ಅಬ್ದುಲ್ ಹಕೀಂ, ಹಸೈನಾರ್ ಕಟ್ಟತ್ತಿಲ, ಉಪಸ್ಥಿತರಿದ್ದರು.